ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ ಹಳ್ಳಿಗಳನ್ನ ದತ್ತು ಪಡೆದು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದನ್ನ ಕೇಳಿದ್ದೇವೆ. ಇಂದು ಮುಂಬೈನಲ್ಲಿ ಯುವಕರಿಗೆ ಹೆಲ್ಮೆಟ್ ಪಾಠ ಹೇಳುವ ಮೂಲಕ ಸಚಿನ್ ಗಮನ ಸೆಳೆದಿದ್ದಾರೆ.
ಸಚಿನ್ ಕಾರಿನಲ್ಲಿ ತೆರಳುತ್ತಿದ್ದಾಗ ಸಿಗ್ನಲ್ ಬಳಿ ಕಾರಿನ ಪಕ್ಕದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲಿಸುತ್ತಿದ್ದ ಯುವಕರನ್ನ ಗಮನಿಸಿ ಮಾತನಾಡಿಸಿದ್ದಾರೆ. ರಸ್ತೆ ಸುರಕ್ಷತೆ ನಮ್ಮ ಅತ್ಯಂತ ಪ್ರಾಧಾನ್ಯ ವಿಷಯವಾಗಬೇಕು. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಬೇಡಿ, ಜೀವ ತುಂಬಾ ಅಮೂಲ್ಯವಾದದ್ದು, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಅಪಾಯಕಾರಿ ಎಂದು ಸಲಹೆ ನೀಡಿದ ಸಚಿನ್, ಮತ್ತೊಮ್ಮೆ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿರುವಂತೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.
ಸಚಿನ್ ಈ ವಿಡಿಯೋವನ್ನ ಟ್ವಿಟ್ಟರ್`ನಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ. ಸಮಾಜದ ಹಲವು ಪ್ರಖ್ಯಾತರು ತಮ್ಮ ಖ್ಯಾತಿ ಈ ರೀತಿ ಬಳಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದಾಗಿದೆ.