Select Your Language

Notifications

webdunia
webdunia
webdunia
webdunia

ಲಿಯಾಂಡರ್ ಪೇಸ್

ಲಿಯಾಂಡರ್ ಪೇಸ್

ಇಳಯರಾಜ

ಗೋವಾದಲ್ಲಿ 1973ರ ಜೂನ್ 17ರಂದು ಜನಿಸಿದರು. ಭಾರತೀಯ ಯಶಸ್ವಿ ಟೆನಿಸ್ ಆಟಗಾರರಲ್ಲಿ ಓರ್ವರಾಗಿದ್ದಾರೆ. ತಾಯಿ ಜೆನ್ನಿಫರ್ ಪೇಸ್ 1980ರಲ್ಲಿ ನಡೆದ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ತಂಡದ ಭಾರತದ ನಾಯಕಿಯಾಗಿದ್ದರು.

ತಂದೆ ವೇಸಿ ಪೇಸ್ ರಾಷ್ಟ್ರೀಯ ಹಾಕಿ ತಂಡದ ಆಟಗಾರರಾಗಿದ್ದರು. 1985 ರಲ್ಲಿ ಚನ್ನೈನ ಬ್ರಿಟಾನಿಯಾ ಟೆನಿಸ್ ಅಕಾಡೆಮಿ ಪ್ರವೇಶಿಸಿದ ನಂತರ ಖ್ಯಾತ ಕೋಚ್ ದವೆ ಓ ಮೀಯರಾ ಅವರಲ್ಲಿ ತರಬೇತಿ ಪಡೆದರು.1991ರಲ್ಲಿ ವಿಂಬಲ್ಡನ್ ಜ್ಯೂನಿಯರ್ ಪ್ರಶಸ್ತಿ ಪಡೆದರು.

1991ರಲ್ಲಿ ಜ್ಯೂನಿಯರ್ ಯು ಎಸ್ ಓಪನ್ ಪ್ರಶಸ್ತಿ ಪಡೆದು ಜ್ಯೂನಿಯರ್ ವರ್ಲ್ಡ್ ಶ್ರೇಣಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ದಾಖಲೆ ಸ್ಥಾಪಿಸಿದರು.1991ರಲ್ಲಿ ಟೆನಿಸ್ ಆಟವನ್ನು ಸಂಪೂರ್ಣವಾಗಿ ವೃತ್ತಿಯಾಗಿ ಸ್ವೀಕರಿಸಿ ಅಟ್ಲಾಂಟಾ ಓಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಪಡೆದರು.

ಮಹೇಶ ಭೂಪತಿಯೊಂದಿಗೆ ಡಬಲ್ಸ್ ಪಂದ್ಯಗಳಲ್ಲಿ ಪ್ರಥಮ ಶ್ರೇಣಿಯಲ್ಲಿದ್ದಾರೆ.ತಮ್ಮ ಅಧ್ಬುತ ಸಾಧನೆಗಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರದಿಂದ ಪಡೆದಿದ್ದಾರೆ.

Share this Story:

Follow Webdunia kannada