Select Your Language

Notifications

webdunia
webdunia
webdunia
webdunia

ರಮೇಶ ಕೃಷ್ಣನ್

ರಮೇಶ ಕೃಷ್ಣನ್

ಇಳಯರಾಜ

ತಮಿಳುನಾಡಿನ ಚೆನ್ನೈಯಲ್ಲಿ 1961 ಜೂನ್ 5 ರಂದು ಜನಿಸಿದರು.ತಂದೆ ರಾಮನಾಥ್‌ರ ಗರಡಿಯಲ್ಲಿ ಪಳಗಿದ ಇವರು 1980 ರಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆದರು.

1979 ರಲ್ಲಿ ವಿಂಬಲ್ಡನ್ ಹಾಗೂ ಫ್ರೆಂಚ್ ಓಪನ್ ಜ್ಯೂನಿಯರ್ ಸಿಂಗಲ್ಸ್ ಪಂದ್ಯಗಳಲ್ಲಿ ವಿಜೇತರಾಗಿದ್ದರು 1981ರಲ್ಲಿ ಯು.ಎಸ್ ಓಪನ್ ಟೂರ್ನಮೆಂಟ್ ಪಂದ್ಯದಲ್ಲಿ ಕ್ವಾರ್ಟರ್ ಹಂತದವರೆಗೆ ತಲುಪಿದ್ದರು.1986ರಲ್ಲಿ ವಿಂಬಲ್ಡನ್ ಪಂದ್ಯದಲ್ಲಿ ಕ್ವಾರ್ಟರ್ ಹಂತದವರೆಗೆ ತಲುಪಿದ್ದರು.

ಟೆನಿಸ್ ಆಟದಲ್ಲಿ 8 ಸಿಂಗಲ್ಸ್ ಪ್ರಶಸ್ತಿ ಹಾಗೂ ಡಬಲ್ಸ್ ಪ್ರಶಸ್ತಿಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದರು. 1985ರ ಜನೆವರಿಯಲ್ಲಿ ಜಗತ್ತಿನ 23 ಶ್ರೇಯಾಂಕದ ಆಟಗಾರರಾಗಿ ಹೊರಹೊಮ್ಮಿದ್ದರು. 1989 ರಲ್ಲಿ ಜಾಗತಿಕ ನಂಬರ್ ಒನ್ ಆಟಗಾರರಾಗಿದ್ದ ಸ್ವೀಡನ್ ದೇಶದ ಮ್ಯಾಟ್ಸ್ ವಿಲ್ಯಾಂಡರ್ ಅವರನ್ನು ಆಸ್ಟ್ರೇಲಿಯಾ ಓಪನ್ ಪಂದ್ಯದ ಎರಡನೇ ಸುತ್ತಿನಲ್ಲಿ ಸೋಲಿಸಿದ್ದರು.

2007ರ ಜನೆವರಿಯಲ್ಲಿ ಡೇವಿಸ್ ಕಪ್ ತಂಡದ ಕೋಚ್ ಹುದ್ದೆಯನ್ನು ವಹಿಸಿಕೊಂಡು ಟೆನಿಸ್ ಆಟಗಾರರಿಗೆ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ.

Share this Story:

Follow Webdunia kannada