Select Your Language

Notifications

webdunia
webdunia
webdunia
webdunia

ಮಹೇಶ ಭೂಪತಿ

ಮಹೇಶ ಭೂಪತಿ

ಇಳಯರಾಜ

ತಮಿಳುನಾಡಿನ ಚನ್ನೈನಲ್ಲಿ 1974 ಜೂನ್ 7 ರಂದು ಜನಿಸಿದರು. 1995 ರಲ್ಲಿ ಟೆನಿಸ್ ಆಟವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಅನೇಕ ಸಾಧನೆಗಳಿಂದಾಗಿ ಭಾರತ ಸರಕಾರ ನೀಡುವ ಪದ್ಮ ಶ್ರೀ ಪ್ರಶಸ್ತಿಯನ್ನು ಪಡೆದರು.

ಇಲ್ಲಿಯವರೆಗೆ 10 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಮಿಕ್ಸ್‌ಡ ಡಬಲ್ಸ್ ಪಂದ್ಯದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ.1999ರಲ್ಲಿ ಜೊತೆಗಾರ ಲಿಯಾಂಡರ್ ಪೇಸ್ ಅವರೊಂದಿಗೆ ಡಬಲ್ಸ್ ಪಂದ್ಯಗಳಲ್ಲಿ ಮೂರು ಡಬಲ್ಸ್ ಪ್ರಶಸ್ತಿಗಳನ್ನು ಪಡೆದರು.1

995 ರಿಂದ 2006 ರವರೆಗೆ 46 ಡೇವಿಸ್ ಕಪ್ ಪಂದ್ಯಗಳಲ್ಲಿ 28 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿ 18ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. 2006 ದೋಹಾದಲ್ಲಿ ನಡೆದ ಏಷಿಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಲಿಯಾಂಡರ್ ಪೇಸ್ ಅವರೊಂದಿಗೆ ಡಬಲ್ಸ್ ಪಂದ್ಯದಲ್ಲಿ ಗೆಲುವನ್ನು ಪಡೆದಿದ್ದಾರೆ.

ಮಹೇಶ ಭೂಪತಿ ತಮ್ಮದೇ ಆದ ಗ್ಲೋಬೋಸ್ಪೋರ್ಟ್ ಸಂಸ್ಥೆಯೊಂದಿಗೆ ಭಾರತದಲ್ಲಿ ಟೆನಿಸ್ ರಂಗವನ್ನು ಅಭಿವೃದ್ದಿಪಡಿಸುವಲ್ಲಿ ಕಾರ್ಯನಿರತರಾಗಿದ್ದಾರೆ.ಜಪಾನ್ ಟೂರ್ನಾಮೆಂಟ್ ಪಂದ್ಯಗಳಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಪಡೆದ ಏಕೈಕ ಭಾರತೀಯರಾಗಿದ್ದಾರೆ.

Share this Story:

Follow Webdunia kannada