Select Your Language

Notifications

webdunia
webdunia
webdunia
webdunia

ಬಾನಂಚಿನಲ್ಲಿ ಮಿನುಗುವ ಹೊಸ ಟೆನಿಸ್ ತಾರೆ

ಬಾನಂಚಿನಲ್ಲಿ  ಮಿನುಗುವ ಹೊಸ ಟೆನಿಸ್ ತಾರೆ

ನಾಗೇಂದ್ರ ತ್ರಾಸಿ

ಭಾರತದಲ್ಲಿ ಇನ್ನೂ ಕ್ರೀಡೆಯನ್ನು ಒಂದು ವೃತ್ತಿಯ ರೂಪದಲ್ಲಿ ಸ್ವೀಕರಿಸುವುದು ಕ್ರಿಕೆಟ್‌ನವರು ಮಾತ್ರ. ರಾಷ್ಟ್ರೀಯ ಕ್ರೀಡೆ ಹಾಕಿಗೂ ಕೂಡ ಇಲ್ಲಿ ಕವಡೆ ಕಾಸು ಇಲ್ಲದ ಸಮಯದಲ್ಲಿ ಅವರುಗಳು ಕೂಡ ಉಪವಾಸ ಕೂಡುತ್ತೆನೆ ಎಂದು ಹೇಳಿದಾಗ ಇಲ್ಲಿನ ಸರಕಾರದವರು ಎದ್ದು ಕುಳಿತುಕೊಳ್ಳುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಟೆನಿಸ್‌ನ್ನೆ ವೃತ್ತಿಯಾಗಿ ಸ್ವೀಕರಿಸುವ ಪ್ರಯತ್ನ ಮಾಡಿ ಸಫಲರಾಗಿದ್ದು ಸಾಹಸದ ಸಂಗತಿ

ಜ್ಯೂನಿಯರ್ ಮಟ್ಟದಲ್ಲಿ ಆಡಿದ ಟೆನಿಸ್ ಪಟು ಅದರಲ್ಲೂ ಅಷ್ಟೇನು ಪ್ರಖ್ಯಾತಿ ಪಡೆಯದ ನ್ಯಾಷನಲ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಎಂದು ನಾವು ಕರೆಯುವ ಟೂರ್ನಿಯೊಂದರಲ್ಲಿ ಮೊದಲ ಬಾರಿಗೆ ಅಪ್ಪಟ ಟೆನಿಸ್ ಪ್ರತಿಭೆಯೊಂದು ಅನಾವರಣಗೊಂಡಿತು.

17 ವರ್ಷದ ಚೆನ್ನೈ ಮೂಲದ ಪ್ರಜ್ಞೇಶ್ ಗುಣೇಶ್ವರನ್ ಈ ಬಾರಿಯ ಚಾಂಪಿಯನ್‌ಷಿಪ್ ಪಟ್ಟ ದಕ್ಕಿಸಿಕೊಂಡದ್ದು ಟೆನಿಸ್ ಮೇಲಿನ ಅಪರಿಮಿತ ಪ್ರೀತಿ ಮತ್ತು ಕಠಿಣ ಪರಿಶ್ರಮದ ಫಲವಾಗಿ. ಮುಂಬೈಯಲ್ಲಿ ಕೆಲವು ದಿನಗಳ ಹಿಂದೆ ಅಂತ್ಯಗೊಂಡ ಟೂರ್ನಿಯಲ್ಲಿ ಪ್ರಬಲ ಪ್ರತಿಸ್ಪರ್ಧಿ ಅಶುತೋಷ್ ಸಿಂಗ್ ಎದುರು ಆಡಿದ್ದು ಮತ್ತು ಸೋತಿದ್ದಕ್ಕಿಂತ ಪ್ರಜ್ಞೇಶ್ ಆಟ ಗಮನ ಸೇಳೆಯುವಂತಿತ್ತು.

ಈ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ, ಇಚ್ಚಾಶಕ್ತಿ ಮತ್ತು ಪಾಲಕರ ಬತ್ತದ ಬೆಂಬಲ ಕಾರಣ ಚೆನ್ನೈನಲ್ಲಿ ಇರುವ ಪ್ರಜ್ಞೇಶ್ ವಿಚಿತ್ರ ಎಂದರೆ ಕಳೆದ ಐದು ವರ್ಷಗಳಿಂದ ಶಾಲೆಯ ಮುಖವನ್ನೇ ನೋಡಿಲ್ಲ.

ಬೆಂಗಳೂರಿನಲ್ಲಿ ಇರುವ ಹೈಪರ್ಪಾರ್ಮನ್ಸ್ ಟೆನಿಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಈತ ಬಾಲಚಂದರ್ ಮತ್ತು ಬ್ರಿಟಿಷ್ ಕೋಚ್ ಜೋನಾಥನ್ ಸ್ಟಬ್ಸ್ ಅವರ ಮಾರ್ಗದರ್ಶನದಲ್ಲಿ ಟೆನಿಸ್ ಕಲೆಗೆ ಸಾಣೆ ಹಿಡಿಯುತ್ತಿದ್ದಾನೆ. ಅಲ್ಲದೇ ಬಾರ್ಸಿಲೋನಾದಲ್ಲಿ ಸ್ಟಬ್ ನಡೆಸುವ ಟೆನಿಸ್ ಸೆಂಟರ್‌ನಲ್ಲಿ ಕೂಡ ತರಬೇತಿ ಪಡೆದು ಹಿಂತಿರುಗಿದ್ದಾನೆ.

12ನೇ ವಯಸ್ಸಿನಲ್ಲಿ ಒಬ್ಬನನ್ನೆ ವಿದೇಶಗಳಿಗೆ ಕಳುಹಿಸಬೇಡಿ ಎಂದು ಸಂಬಂಧಿಕರು ಹೇಳಿದರು ಅವರ ಮಾತಿಗೆ ನಾವು ಕಿವಿಗೊಟ್ಟು ಮಗನನ್ನು ನಮ್ಮ ಹತ್ತಿರ ಇಟ್ಟುಕೊಂಡಿದ್ದರೆ ಇಂದು ಈ ಎತ್ತರಕ್ಕೆ ಎರುತ್ತಲೆ ಇರಲಿಲ್ಲ ಎನ್ನುತ್ತಾರೆ ತಂದೆ ಎಸ್.ಜಿ ಪ್ರಭಾಕರನ್. ವೃತ್ತಿಯಿಂದ ಅವರು ಕಾರ್ಪೋರೆಟ್ ಲಾಯರ್.
ಮೊದಲು ಎನಪ್ಪಾ ಬರಿ ಟೆನಿಸ್ ಆಡುವುದಕ್ಕ ಅವನನ್ನು ಹೇಗೆ ಬಿಡುವುದು.ಅವನು ಅಮೆರಿಕದಲ್ಲಿ ಓದಲಿ ಎನ್ನುವುದು ನನ್ನಾಸೆಯಾಗಿತ್ತು. ನನ್ನ ಪತ್ನಿ ಅವನಿಗೊಂದು ಅವಕಾಶ ನೀಡಿ ಎಂದು ಹೇಳಿದ ಮೇಲೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು.

ಮಹೇಶ್ ಭೂಪತಿ ಅವರ ಗ್ಲೋಬೊಸ್ಪೋರ್ಟ್ ಪೂರ್ಣ ಪ್ರಮಾಣದ ವೆಚ್ಚ ಭರಿಸುವುದಾಗಿ ಆಹ್ವಾನ ನೀಡಿತ್ತು. ಆದರೆ ಎಚ್‌ಟಿಎಫ್‌ಸಿಯಲ್ಲಿ ಟೆನಿಸ್ ಜೊತೆಗೆ ಅಗತ್ಯ ಶಿಕ್ಷಣವೂ ಇದ್ದುದರಿಂದ ಅದಕ್ಕೆ ಗಮನ ನೀಡಿದೆ ಅಷ್ಟು ಸಾಕು ಎಂದು ತೃಪ್ತಿ ವ್ಯಕ್ತಪಡಿಸಿದಾಗ ಮಗನ ಭವಿಷ್ಯದ ಕುರಿತು ಇದ್ದ ಕಾಳಜಿ ಬದಲು ಮುಖದಲ್ಲಿ ನಿರಾಳತೆ ಇತ್ತು. ಮೊನ್ನೆ ತನ್ನ ಕೇಂಬ್ರಿಡ್ಜ್ ಇಂಟರನ್ಯಾಷನಲ್ ಪರೀಕ್ಷೆಯನ್ನು ಪ್ರಜ್ಞೇಶ್ ಬರೆದಿದ್ದಾನೆ.

Share this Story:

Follow Webdunia kannada