Article Olympics News In Kannada %e0%b2%ab%e0%b3%88%e0%b2%a8%e0%b2%b2%e0%b3%8d %e0%b2%a4%e0%b2%b2%e0%b3%81%e0%b2%aa%e0%b2%bf%e0%b2%a6 %e0%b2%a8%e0%b2%a1%e0%b2%be%e0%b2%b2%e0%b3%8d 108081600015_1.htm

Daily Horoscope

Select Your Language

Notifications

webdunia
webdunia
webdunia
webdunia

ಫೈನಲ್ ತಲುಪಿದ ನಡಾಲ್

ರಾಫೆಲ್ ನಡಾಲ್
ಅಗ್ರ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ ಅವರ ಕನಸು ಭಗ್ನವಾಗುವ ಮೂಲಕ,ಮತ್ತೊಬ್ಬ ಟೆನ್ನಿಸ್ ತಾರೆ ರಾಫೆಲ್ ನಡಾಲ್ ಅವರ ಹಾದಿ ಸುಗಮವಾಗಿದ್ದು, ಶುಕ್ರವಾರ ನಡೆದ ಒಲಿಂಪಿಕ್ ಗೇಮ್ಸ್‌‌ನ ಪುರಷರ ಟೆನ್ನಿಸ್ ಹಣಾಹಣಿಯಲ್ಲಿ ಸ್ಪೇಯ್ನ್‌ನ ನಡಾಲ್ ಎದುರಾಳಿ ನೊವಾಕ್ ಜೊಕೋವಿಕ್ ಅವರನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಭಾನುವಾರ ನಡೆಯಲ್ಲಿರುವ ಅಂತಿಮ ಕದನದಲ್ಲಿ ನಡಾಲ್ ಅವರು ಚಿಲ್ಸೆಯ ಫೆರ್ನಾಂಡೋ ಗೋನ್ಜ್‌‌ಲೆಜ್ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.

ನೋವಾಕ್ ಅವರೊಂದಿಗೆ ಶುಕ್ರವಾರ ನಡೆದ ಎರಡನೇ ಸೆಟ್‌‌ನಲ್ಲಿ ಸುಮಾರು 2ಗಂಟೆ 10ನಿಮಿಷಗಳ ಹೋರಾಟದಲ್ಲಿ ನಡಾಲ್ ಅವರು 6-4,1-6,6-4ರ ಮ್ಯಾಚ್ ಪಾಯಿಂಟ್‌ಗಳ ಅಂತರಲ್ಲಿ ಸೋಲನ್ನುಣಿಸಿದರು.

ಒಟ್ಟು ನೋವಾಕ್ ವಿರುದ್ಧದ ಮೂರು ಸೆಟ್‍ಗಳನ್ನು ನಿರಾಯಾಸವಾಗಿ ಗೆಲ್ಲುವ ಮೂಲಕ ರಾಫೆಲ್ ನಡಾಲ್ ಅವರ ಸ್ವರ್ಣ ಪದಕದ ಕನಸು ನನಸಾಗುವ ನಿರೀಕ್ಷೆ ಹೆಚ್ಚಾಗಿದೆ.

ಈ ಮೊದಲು ಒಲಿಂಪಿಕ್ ಗೇಮ್ಸ್‌ನ ಭಾನುವಾರದ ಅಂತಿಮ ಹಣಾಹಣಿಯಲ್ಲಿ ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಮುಖಾಮುಖಿಯಾಗುವ ಸಾಧ್ಯತೆ ಇರುವುದಾಗಿ ನಿರೀಕ್ಷಿಸಲಾಗಿತ್ತು.

Share this Story:

Follow Webdunia kannada