Select Your Language

Notifications

webdunia
webdunia
webdunia
webdunia

ಮಹಿಳಾ ಹಾಕಿ: 24ವರ್ಷದ ಬಳಿಕ ನೆದರ್‌ಲ್ಯಾಂಡ್‌ಗೆ ಚಿನ್ನ

ಮಹಿಳಾ ಹಾಕಿ: 24ವರ್ಷದ ಬಳಿಕ ನೆದರ್‌ಲ್ಯಾಂಡ್‌ಗೆ ಚಿನ್ನ
ಬೀಜಿಂಗ್ , ಶುಕ್ರವಾರ, 22 ಆಗಸ್ಟ್ 2008 (21:28 IST)
ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ನೆದರ್‌ಲ್ಯಾಂಡ್ ಎದುರಾಳಿ ಚೀನಾವನ್ನು2-0ರ ಅಂತರದಲ್ಲಿ ಸೋಲಿಸುವ ಮೂಲಕ ಕಳೆದ 24ವರ್ಷಗಳ ಬಳಿಕ ಸ್ವರ್ಣ ಪದಕವನ್ನು ತನ್ನ ಕೊರಳಿಗೆ ಅಲಂಕರಿಸಿಕೊಳ್ಳುವ ಮೂಲಕ ಗೆಲುವಿನ ನಗು ಬೀರಿದೆ.

ಹಾಕಿ ಹಣಾಹಣಿಯ ದ್ವಿತೀಯಾರ್ಥದಲ್ಲಿ ನೆದರ್‌ಲ್ಯಾಂಡ್‌ನ ಬಲಿಷ್ಠ ತಂಡ ಚೀನಾವನ್ನು ಸಮರ್ಥವಾಗಿ ಎದುರಿಸುವ ಮೂಲಕ ಹಾಕಿಯಲ್ಲಿ ಚಿನ್ನದ ಪದಕ ಜಯಿಸಿದೆ.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ನೆದರ್‌ಲ್ಯಾಂಡ್ ಹಾಕಿ ಹೋರಾಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿತ್ತು.ಆದರೆ 1984ರ ಬಳಿಕ ಅದು ಚಿನ್ನವನ್ನು ಗೆದ್ದಿರಲಿಲ್ಲವಾಗಿತ್ತು.

ಚೀನಾ ಮಹಿಳಾ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು,ಅರ್ಜೈಂಟೀನಾ ಜರ್ಮನಿಯನ್ನು ಮಣಿಸುವ ಮೂಲಕ ಕಂಚಿನ ಪದಕ ಪಡೆದಿದೆ.

ಶುಕ್ರವಾರ ನಡೆದ ಮಹಿಳಾ ಹಾಕಿ ಹೋರಾಟದಲ್ಲಿ ನೆದರ್‌ಲ್ಯಾಂಡ್ ತಂಡ ಅಂತಿಮ ಸುತ್ತಿನಲ್ಲಿ 51ನಿಮಿಷಗಳಲ್ಲಿ ನವೋಮಿ ವಾನ್ ಸಮರ್ಥವಾಗಿ ಸ್ಟಿಕ್ ಬಳಸಿಕೊಂಡು ಅಂಕವನ್ನು ತಮ್ಮದಾಗಿಸಿಕೊಂಡರು. ಚೀನಾ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಪೆನಲ್ಟಿ ಕಾರ್ನರ್ ಅವಕಾಶದಿಂದ ವಂಚಿತವಾಗಿತ್ತು.

Share this Story:

Follow Webdunia kannada