Article Nonvegetarian %e0%b2%b8%e0%b3%8d%e0%b2%aa%e0%b3%88%e0%b2%b8%e0%b3%80 %e0%b2%ae%e0%b2%b6%e0%b3%8d%e0%b2%b0%e0%b3%82%e0%b2%ae%e0%b3%8d %e0%b2%9a%e0%b2%bf%e0%b2%95%e0%b2%a8%e0%b3%8d 109040300063_1.htm

Select Your Language

Notifications

webdunia
webdunia
webdunia
webdunia

ಸ್ಪೈಸೀ ಮಶ್ರೂಮ್ ಚಿಕನ್

ಸ್ಪೈಸೀ ಮಶ್ರೂಮ್ ಚಿಕನ್
ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ಚಿಕನ್ ತುಂಡುಗಳು - 100 ಗ್ರಾಂ
ಮೆಣಸಿನಪುಡಿ - 2 ಚಮಚ
ಎಣ್ಣೆ - 2 ಚಮಚ
ಸೋಯಾಸಾಸ್ - 1 ಚಮಚ
ಬೆಳ್ಳುಳ್ಳಿ ಶುಂಠಿ ಪೇಸ್ಟ್ - 1 ಚಮಚ
ತೊಳೆದು ಕಾಂಡಗಳನ್ನು ತೆಗೆದು ಕತ್ತರಿಸಿದ ಬಟನ್ ಮಶ್ರೂಮ್ (ಅಣಬೆ) - 200 ಗ್ರಾಂ
ಕತ್ತರಿಸಿದ ಈರುಳ್ಳಿ ಮೊಳಕೆಗಳು - 1 ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು

ಪಾಕ ವಿಧಾನ:

ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ ಇದಕ್ಕೆ ಬೇಯಿಸಿದ ಚಿಕನ್ ತುಂಡುಗಳನ್ನು ಸೇರಿಸಿ. ಇದಕ್ಕೆ ಮೆಣಸಿನ ಪುಡಿ, ಸೋಯಾಸಾಸ್, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ 5 ನಿಮಿಷ ಹುರಿಯಿರಿ. ಚಿಕನ್ ಕಂದು ಬಣ್ಣಕ್ಕೆ ಬಂದಾಗ ಅಣಬೆಗಳನ್ನು ಸೇರಿಸಿ ಉಪ್ಪು ಹಾಕಿ. ಅಣಬೆಗಳು ಬೇಯುವವರೆಗೆ ಬೇಯಿಸಿ. ಕೊಚ್ಚಿದ ಈರುಳ್ಳಿ ಚೂರುಗಳಿಂದ ಅಲಂಕರಿಸಿ. ಅನ್ನದೊಂದಿಗೆ ಮೇಲಡಿಗೆಯಾಗಿ ಬಡಿಸಿ.

Share this Story:

Follow Webdunia kannada