ಬೇಕಾಗುವ ಸಾಮಾನುಗಳು : 1 ಮಧ್ಯಮಗಾತ್ರದ ಕಾಲಿ ಫ್ಲಾವರ್ ,ಮಧ್ಯಮ ಗಾತ್ರದ ಹೂವುಗಳಾಗಿ ಕತ್ತರಿಸಿದ , 1ಟೀ ಚಮಚ ಉಪ್ಪು , 1ಟೀ ಚಮಚ ಅರಿಷಿನ ಪುಡಿ, ಕಾಲೂ ಚಮಚ ಅರಿಶಿನ ಕಾಲು ಬಟ್ಟಲು ನೀರು ,2 ಹಸಿ ಮೊಟ್ಟೆಗಳು ಕಾಲು ಚಮಚ ಉಪ್ಪಿನೊಂದಿಗೆ ಹಗುರವಾಗ ಕಟೆದಿದ್ದು ಮೇಲು ಮೇಲೆ ಹುರಿದ ಎಣ್ಣೆ.
ತಯಾರಿಸುವ ವಿಧಾನ: ಪಾತ್ರೆಯಲ್ಲಿ ಉಪ್ಪು ಮೆಣಸಿನ ಪುಡಿ, ಅರಿಸಿನ ಮತ್ತು ನೀರು ಸೇರಿಸಿ ಕಾಲಿ ಫ್ಲಾವರ್‌ನ್ನು 3/4ರಷ್ಟು ಬೇಯುವವರೆಗೆ ಬೇಯಿಸಿ.ಕಾಲಿಫ್ಲಾವರ್ (ಹೂ ಕೋಸು) ತಂಪಗೆ ಮಾಡಿ. ಪ್ರತಿ ಕಾಲಿಫ್ಲಾವರ್ ತುಂಡನ್ನು ಕಟಿದ ಮೊಟ್ಟೆಯಲ್ಲಿ ಅದ್ದಿ ಹೊನ್ನಿನ ಕಂದು ಬಣ್ಣ ಬರುವವರೆಗೆ ಮೇಲುಮೇಲೆ ಹುರಿಯಿರಿ ಇದೊಂದು ಒಳ್ಳೆಯ ಮೇಲೋಗರ.