ಬೇಕಾಗುವ ಸಾಮಾನುಗಳು: ಮಾಂಸದ ಚೂರುಗಳು, ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಪುಡಿ, ಅರಸಿನ ಪುಡಿ, ಮೆಣಸಿನ ಪುಡಿ, ತೆಂಗಿನತುರಿ, ಗೋಡಂಬಿ ಪೇಸ್ಟ್, ಗಸೆಗಸೆ ಪೇಸ್ಟ್, ಟೋಮೇಟೋ ಪೇಸ್ಟ್, ನೀರು, ಉಪ್ಪು, ಬೇಯಿಸಿದ ಮೊಟ್ಟೆ, ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ: ಚೆನ್ನಾಗಿ ಒಣಗಿದ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ ಅರೆದ ಈರುಳ್ಳಿ ಪೇಸ್ಟ್ ಸೇರಿಸಿ ತೆಳು ಕಂದು ಬರುವವರೆಗೂ ಕದಡಬೇಕು.ಹಾಗೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ನ್ನೂ ಸೇರಿಸಿ ಅದೇ ರೀತಿ ಕದಡಬೇಕು. ನಂತರ ಜೀರಿಗೆ ಪುಡಿ, ಅರಸಿನ ಪುಡಿ ಮತ್ತು ಮೆಣಸಿನ ಪುಡಿ, ಕೊತ್ತಂಬರಿ ಬೀಜದ ಪುಡಿ ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಬೇಕು.ಇದಕ್ಕೆ ಗೋಡಂಬಿ, ಗಸೆಗಸೆ,ತೆಂಗಿನ ತುರಿ ಸೇರಿಸಿ 5 ನಿಮಿಷಗಳ ಕಾಲ ಹುರಿದು ಟೋಮೇಟೋ ಪೇಸ್ಟ್ ಸೇರಿಸಿಡಬೇಕು. ಆನಂತರ ಹಸಿ ಮಾಂಸದ ಚೂರುಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಮತ್ತು ಉಪ್ಪನ್ನು ಸೇರಿಸಬೇಕು.ಇವುಗಳನ್ನು 10 ನಿಮಿಷಗಳ ಕಾಲ ಬೇಯಿಸಿ ಪ್ರತೀ ಬೇಯಿಸಿದ ಮೊಟ್ಟೆಯ ಕಾಲು ಭಾಗ ಕತ್ತರಿಸಿ ಮಾಂಸದ ಮೇಲಿಟ್ಟರೆ ಸೊಗಸಾದ ಪಲ್ಯ ರೆಡಿ.ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದಲ್ಲಿ ನೋಡುವುದಕ್ಕೂ ಸೊಗಸಾಗಿರುತ್ತದೆ.