Select Your Language

Notifications

webdunia
webdunia
webdunia
webdunia

ಮಾಂಸ ಬಟಾಣಿ ಪಲ್ಯ

ಮಾಂಸ ಬಟಾಣಿ ಪಲ್ಯ
8 ಮಂದಿಗೆ ಬೇಕಾಗುವ ಸಾಮಗ್ರಿಗಳು:

1/2 ಕಜಿ ಮಾಂಸದ ತುಂಡುಗಳು6 ಟೇಬಲ್ ಚಮಚ ಎಣ್ಣೆ

ಸಂಬಾರ ಪದಾರ್ಥಗಳು:

2 ಕಡ್ಡಿ ದಾಲ್ಚಿನಿ, 4 ಏಲಕ್ಕಿ, 4 ಲವಂಗಕರಿಬೇವು ಎಲೆಗಳು ಸ್ವಲ್ಪ, 1 ಚಮಚ ಸಾಸಿವೆ, 4 ಈರುಳ್ಳಿ(ಪೇಸ್ಟ್ ಮಾಡಿದ್ದು),3 ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್, 1 ಚಮಚ ಅರಸಿನ 4 ಚಮಚ ಮೆಣಸಿನ ಪುಡಿ, 2 ಚಮಚ ಧನಿಯ ಪುಡಿ, 4 ಚಮಚ ಉಪ್ಪು, ನೀರು,1/2 ಕೆಜಿ ತಾಜಾ ಬಟಾಣಿ, 1 ಬಟ್ಟಲು ಕಟಿದ ಮೊಸರು,1ಚಮಚ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ:

ಪ್ರೆಶರ್‌ ಕುಕ್ಕರ್‌ವೊಂದರಲ್ಲಿ ಎಣ್ಣೆ ಹಾಕಿ ಅದು ಕಾದ ನಂತರ ಸಂಬಾರ ಪದಾರ್ಥಗಳೊಂದಿಗೆ ಕರಿಬೇವು ಮತ್ತು ಸಾಸಿವೆ ಎಲೆಗಳೊಂದಿಗೆ ಹುರಿಯಬೇಕು. ಸಾಸಿವೆ ಚೆನ್ನಾಗಿ ಸಿಡಿದ ನಂತರ ಈರುಳ್ಳಿ ಪೇಸ್ಟ್ ಜತೆ ಸೇರಿಸಿ ಕಂದು ಬಣ್ಣಕ್ಕೆ ತಿರುಗುವವರೆಗೂ ಹುರಿಯಬೇಕು.ನಂತರದಲ್ಲಿ ಪೇಸ್ಟ್ ಮಾಡಿಟ್ಟಿದ್ದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿಮದಲಿನಂತಯೇ ಹುರಿಯಬೇಕು. ಅದರಂತೆ ಇದಾದ ನಂತರ ಅರಸಿನ, ಮೆಣಸಿನ ಪುಡಿ, ಧನಿಯಪುಡಿಯನ್ನೂ 5 ನಿಮಿಷಗಳ ಕಾಲ ಹುರಿಯಬೇಕು.ಇದಕ್ಕೆ ಹಸಿ ಮಾಂಸ ತುಂಡುಗಳನ್ನು 4 ಚಮಚಉಪ್ಪನ್ನು 3 ಬಟ್ಟಲು ನೀರಿನ ಜತೆಗೆ ಸೇರಿಸಿ ಕದಡಬೇಕು.ಅನಂತರ ಇದನ್ನು 10 ನಿಮಿಷಗಳ ಕಾಲ ಬೇಯಿಸಿ ಮೊಸರು ಸೇರಿಸಿ ಚೆನ್ನಾಗಿ ಕಲಕಬೇಕು.ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಉಪಯೋಗಿಸಬಹುದು. ರೊಟ್ಟಿ ಅಥವಾ ಅನ್ನದ ಜತೆಗೆ ಇದನ್ನು ಸವಿಯಬಹುದು.

Share this Story:

Follow Webdunia kannada