ಬೇಕಾಗುವ ಸಾಮಾಗ್ರಿಗಳು
500 ಗ್ರಾಂ. ಮಾಂಸ
4 ದೊಡ್ಡ ಈರುಳ್ಳಿ, ಟೊಮಾಟೊ
100 ಗ್ರಾಂ. ಮೊಸರು
3 ಏಲಕ್ಕಿ, ಬೆಳ್ಳುಳ್ಳಿ
ಅರ್ಧ ಸ್ಪೂನ್ ಜೀರಿಗೆ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿರು ಮೆಣಸು
1 ಸ್ಪೂನ್ ಶುಂಠಿ ಪೇಸ್ಟ್
ತಯಾರಿಸುವ ವಿಧಾನ:
ಈರುಳ್ಳಿ, ಟೊಮಾಟೊವನ್ನು ಕತ್ತರಿಸಿ ರೆಡಿ ಮಾಡಿಟ್ಟುಕೊಳ್ಳಿ. ಬಾಣಲೆಯನ್ನು ತೆಗೆದುಕೊಂಡು, ಎಣ್ಣೆ ಹಾಕಿ ಬಿಸಿಮಾಡಿ. ಅದು ಸರಿ ಬಿಸಿ ಆದಾಗ ಕರಿಬೇವು, ಏಲಕ್ಕಿ, ಬೆಳ್ಳುಳ್ಳಿ, ಜೀರಿಗೆಯನ್ನು ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ಅದು ಕಡುಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಮಾಂಸವನ್ನು ಸೇರಿಸಿ, ಮಿಶ್ರಮಾಡಿ ಬೇಯಿಸಿರಿ. ಬೆಣ್ಣೆಯನ್ನು ಚದುರಿಸಿ ಸೇರಿಸಿ, ಶುಂಠಿ ಪೇಸ್ಟ್, ಟೊಮಾಟೊ ಎಲ್ಲವನ್ನು ಹಾಕಿ 15 ನಿಮಿಷದವರೆಗೆ ಬೇಯಿಸಿರಿ. ಮಾಂಸ ಬೆಂದ ನಂತರ ಒಲೆಯಿಂದ ತೆಗೆಯಿರಿ. ರೆಡಿಯಾದ ಮಟನ್ ರೋಗನ್ ಜೋಶ್ ಅನ್ನು ಬಿಸಿಬಿಸಿಯಾಗಿ ಸವಿಯಿರಿ.