ಒಂದು ಪಾತ್ರೆಯಲ್ಲಿ ಸ್ವಚ್ಛಗೊಳಿಸಿದ ಸಿಗಡಿ ಮೀನನ್ನು ಸ್ಪಲ್ಪವೇ ನೀರು ಮತ್ತು ಆರ್ಧ ಟೀ ಚಮಚ ಉಪ್ಪು ಬೆರೆಸಿ ಐದೇ ನಿಮಿಷ ಬೇಯಿಸಿ. ನೀರು ಆವಿಯಾಗುತ್ತಿರುವಂತೆ ಕೆಳಗಿರಿಸಿ. ಬಣಲೆ ಅಥವಾ ಅಗಲ ಪಾತ್ರೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆಕಾಯಿಸಿ. ಈ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಜೀರಿಗೆ ಪುಡಿ, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಚೆನ್ನಾಗಿ ಹೊಂದಿಕೊಂಡ ಬಳಿಕ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಹುರಿಯಿರಿ. ಎಲ್ಲವೂ ಚೆನ್ನಾಗಿ ಹೊಂದಿಕೊಂಡ ಬಳಿಕ ಬೇಯಿಸಿಟ್ಟ ಸಿಗಡಿ ಮೀನು ಸೇರಿಸಿ. ಮಿಕ್ಸ್ ಮಾಡಿ. ಅದಾದ ಮೇಲೆ ಬೇಕಷ್ಟು ಉಪ್ಪು ಹಾಗೂ ಬೇಕಿದ್ದರೆ ಸ್ವಲ್ಪ ಗರಂ ಮಸಾಲೆ ಸೇರಿಸಿ. ಚೆನ್ನಾಗಿ ಕೈಯಾಡಿಸಿ ಎರಡು ನಿಮಿಷದ ಬಳಿಕ ಚಿಕ್ಕದಾಗಿ ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. ಬಿಸಿಬಿಸಿ ಸೇವಿಸಿದರೆ ಒಂದು ಹಿಡಿ ರುಚಿ ಹೆಚ್ಚು.