ಬೇಕಾಗುವ ಸಾಮಾನುಗಳು ಅರ್ಧ ಕೆಜಿ ಸಿಯರ್ ಮೀನು -ಕತ್ತರಿಸಿದ,1 ಟೀ ಚಮಚ ಜೀರಿಗೆ ಪುಡಿ ಕಾಲು ಟೀ ಚಮಚೆ ಅರಿಷಿಣ ಪುಡಿ ಒಂದುವರೆಯಿಂದ ಎರಡು ಟೀ ಚಮಚ ಮೆಣಸಿನಪುಡಿ, ಅರ್ಧ ಟೀ ಚಮಚ ನಿಂಬೆರಸ ಅಥವಾ ಮಿನೆಗಾರ್ 1 ಟೀ ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್ 2 ಟೇಬಲ್ ಚಮಚೆ ಉಪ್ಪು ಎಣ್ಣೆ ಹುರಿಯಲು.
ತಯಾರಿಸುವ ವಿಧಾನ ಜೀರಿಗೆ ಪುಡಿ,ಅರಿಷಿಣ ,ಮೆಣಸಿನಪುಡಿ,ನಿಂಬೆರಸ ಬೆಳ್ಳುಳ್ಳಿ ,ಶುಂಠಿ ಪೇಸ್ಟ್ ಮತ್ತು ಉಪ್ಪು ಇವುಗಳನ್ನು ಮೀನಿನಲ್ಲಿ ತಿಕ್ಕಿ. ಕನಿಷ್ಠ ಅರ್ಧ ಗಂಟೆ ನೆನೆಹಾಕಿ. ಕಾವಲಿಯಲ್ಲಿ ಎರಡೂ ಪಕ್ಕೆಗಳು ಕಂದುಬಣ್ಣ ಬರುವವರೆಗೆ ಮೀನಿನಿ ತುಂಡುಗಳನ್ನು ಮೇಲುಮೇಲನೆ ಹುರಿಯಿರಿ. ಇದು ಮೋಲೋಗರವಾಗಿರಬಲ್ಲದು.