ಬೇಕಾಗುವ ಸಾಮಾಗ್ರಿಗಳು:
ಯಾವುದೇ ಮೀನು - ಅರ್ಧ ಕೆಜಿ
ಶುಂಠಿ ಬೆಳ್ಳು ಪೇಸ್ಟ್ - ಸ್ವಲ್ಪ
ಕೆಂಪು ಮೆಣಸು - 1 ಮುಷ್ಟಿಯಷ್ಟು
ಜೀರಿಗೆ - 1 ಚಮಚ
ವಿನೆಗರ್
ಎಣ್ಣೆ
ಪಾಕ ವಿಧಾನ :
ಮೀನನ್ನು ಶುಚಿಗೊಳಿಸಿ, ಅರ್ಧ ಇಂಚು ಅಳತೆಯಲ್ಲಿ ತುಂಡು ಮಾಡಿ ಈ ತುಂಡುಗಳನ್ನು ಕರಿಯಿರಿ. ಮೆಣಸು, ಜೀರಿಗೆ, ವಿನೆಗರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇವುಗಳನ್ನೆಲ್ಲಾ ನೀರು ಹಾಕದೆ ರುಬ್ಬಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ರುಬ್ಬಿದ ಮಸಾಲೆ ಹಾಕಿ 5-7 ನಿಮಿಷ ಹುರಿಯಿರಿ. ನಂತರ ಇದಕ್ಕೆ ಈಗಾಗಲೇ ಹುರಿದ ಮೀನನ್ನು ಹಾಕಿ ಚೆನ್ನಾಗಿ ಬೆರೆಸಿ. ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಕಲಸುತ್ತಾ ಇರಿ. ಇದು ಕೆಡದಂತಿರಲು ಹೆಚ್ಚು ವಿನೆಗರ್ ಮತ್ತು ಎಣ್ಣೆಯನ್ನು ಉಪಯೋಗಿಸಿ.