Select Your Language

Notifications

webdunia
webdunia
webdunia
webdunia

ಫಿಶ್ ಕೋಲಿವಾಡಾ

ಫಿಶ್ ಕೋಲಿವಾಡಾ
ಬೇಕಾಗುವ ಸಾಮಾಗ್ರಿಗಳು:
ಯಾವುದೇ ಬಗೆಯ ಮೀನು - ಅರ್ಧ ಕೆಜಿ
ಕೆಂಪು ಮೆಣಸಿನ ಹುಡಿ - 2 ಚಮಚ
ತಂದೂರಿ ಕಲರ್ - ಅರ್ಧ ಚಮಚ
ಶುಂಠಿ ಪೇಸ್ಟ್ - ಕಾಲು ಚಮಚ
ಬೆಳ್ಳುಳ್ಳಿ ಪೇಸ್ಟ್ - ಕಾಲು ಚಮಚ
ಗರಂ ಮಸಾಲಾ - 1 ಚಮಚ
ಬೇಸನ್ - 100 ಗ್ರಾಂ
ಜೀರಿಗೆ ಹುಡಿ - ಅರ್ಧ ಚಮಚ
ಅಮ್ಕೂರ್ ಹುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಅರಶಿನ ಪುಡಿ - ಸ್ವಲ್ಪ

ಪಾಕ ವಿಧಾನ:

ಮೀನನ್ನು ಶುಚಿಗೊಳಿಸಿ ಅದಕ್ಕೆ ಅರಶಿನ ಮತ್ತು ಉಪ್ಪು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ. ಮೀನು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಈ ಮಿಶ್ರಣವನ್ನು ಮೀನಿಗೆ ಸವರಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಕರಿದ ಮೀನಿನ ಮೇಲೆ ನಿಂಬೆರಸ ಮತ್ತು ಚಾಟ್ ಮಸಾಲಾ ಸಿಂಪಡಿಸಿ.

Share this Story:

Follow Webdunia kannada