ಬೇಕಾಗುವ ಸಾಮಾಗ್ರಿಗಳು:
ಪ್ರಾನ್ - ಅರ್ಧ ಕೆ.ಜಿ.
ಹುಣಸೇ ರಸ- 2 ಚಮಚ
ಮೆಣಸಿನ ಪುಡಿ - 2 ಚಮಚ
ಅರಶಿನ ಪುಡಿ - ಸ್ವಲ್ಪ
ನೀರುಳ್ಳಿ
ಶುಂಠಿ - ಸಣ್ಣ ತುಂಡು
ಟೊಮ್ಯಾಟೋ - 3
ಉಪ್ಪು - ರುಚಿಗೆ ತಕ್ಕಷ್ಟು
ಪಾಕ ವಿಧಾನ:
ಮೊದಲಿಗೆ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ನೀರುಳ್ಳಿ, ಟೊಮ್ಯಾಟೋ ಮತ್ತು ಶುಂಠಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಪ್ರಾನ್, ಮೆಣಸಿನಪುಡಿ, ಅರಶಿನ ಪುಡಿ ಮತ್ತು ಉಪ್ಪು ಸೇರಿಸಿ. ಪ್ರಾನ್ ಅರ್ಧ ಬೆಂದ ನಂತರ ಹುಣಸೆರಸವನ್ನು ಸೇರಿಸಿ, ಸ್ವಲ್ಪ ವೀರನ್ನು ಕೂಡಾ ಸೇರಿಸಿ. ದಪ್ಪವಾಗುವವರೆಗೆ ಬೇಯಿಸಿ ಕೊನೆಯಲ್ಲಿ ಕರಿಬೇವಿನ ಸೊಪ್ಪನ್ನು ಸೇರಿಸಿ. ಅನ್ನ ಅಥವಾ ಚಪಾತಿಯೊಂದಿಗೆ ಬಿಸಿ ಇರುವಾಗಲೇ ತಿನ್ನಿರಿ.