ಬೇಕಾಗುವ ಸಾಮಾಗ್ರಿಗಳು :1 ಕಪ್ ಮಶ್ರೂಂ ಚೂರುಗಳು, 1 ನೀರುಳ್ಳಿ, 1 ಕಪ್ ಟೊಮ್ಯಾಟೋ ಪೂರಿ, 1 ಚಮಚ ಗರಂ ಮಸಾಲಾ, 1 ಚಮಚ ಏಲಕ್ಕಿ ಪುಡಿ, 1 ಚಮಚ ಅರಶಿನ ಪುಡಿ, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಟೊಮ್ಯಾಟೋ ಪೂರಿ, ಅರಶಿನ ಪುಡಿ ಮತ್ತು ಉಪ್ಪು ಬೆರೆಸಿರಿ. ಕೆಲವು ನಿಮಿಷಗಳ ನಂತರ ಮಶ್ರೂಂ ಬೆರೆಸಿ ಮುಚ್ಚಳ ಮುಚ್ಚಿ 10 ಹೊತ್ತು ಬಿಡಿ. ನಂತರ ಇದಕ್ಕೆ ಗರಂ ಮಸಾಲಾ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.