ಬೇಕಾಗುವ ಸಾಮಗ್ರಿಗಳು: ಎರಡು ಈರುಳ್ಳಿ, ಎರಡು ಬೆಳ್ಳುಳ್ಳಿ, ಎಂಟು ಟೊಮ್ಯಾಟೋ, ಎರಡು ಚಮಚ ಬೆಣ್ಣೆ, ಎರಡು ಚಮಚ ಶುಂಠಿ ಪೇಸ್ಟ್, ಒಂದು ಚಿಟಿಕೆ ಅರಿಶಿನ, ಕಾಲು ಚಮಚ ಮೆಣಸಿನ ಹುಡಿ, ಒಂದು ಚಮಚ ಜೀರಿಗೆ, ಒಂದು ಚಮಚ ಕರಿಮೆಣಸಿನ ಪುಡಿ, ಉಪ್ಪು, ಒಂದು ಚಮಚ ಗರಂಮಸಾಲ, ಆರು ಚೆನ್ನಾಡಿ ಬೇಯಿಸಿದ ಮೊಟ್ಟೆ.
ಮಾಡುವ ವಿಧಾನ: ಒಂದು ಈರುಳ್ಳಿಯನ್ನು ಸ್ಲೈಸ್‌ಗಳಾಗಿ ಕತ್ತರಿಸಿಡಿ. ಇನ್ನೊಂದು ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಚೆನ್ನಾಗಿ ಕತ್ತರಿಸಿ. ಬೆಣ್ಣೆ ಬಿಸಿ ಮಾಡಿ ಸ್ಲೈಸ್ ಮಾಡಿಟ್ಟ ಈರುಳ್ಳಿಯನ್ನು ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಒಲೆಯಿಂದ ಕೆಳಗಿಳಿಸಿ ಅದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಗೂ ಬೆಳ್ಳುಳ್ಳಿ ಚೂರುಗಳನ್ನು ಜೀರಿಗೆ, ಮೆಣಸಿನಪುಡಿ, ಕರಿಮೆಣಸು, ಅರಿಶಿನ, ಶುಂಠಿ ಪೇಸ್ಟ್ ಹಾಕಿ. ಐದು ನಿಮಿಷ ಫ್ರೈ ಮಾಡಿ. ಟೊಮ್ಯಾಟೋಗಳನ್ನು ಹಾಕಿ. ಹಾಗೇ ಸ್ವಲ್ಪ ಹೊತ್ತು ಒಲೆಯಲ್ಲಿರಲಿ. ನಂತರ ಹದಕ್ಕೆ ಬಂದುದು ಕಂಡರೆ, ಗರಂಮಸಾಲಾ ಸೇರಿಸಿ. ನಂತರ ಬೇಯಿಸಿ ಮೊಟ್ಟೆಯನ್ನು ತುಂಡುಗಳಾಗಿ ಮಾಡಿ ಹಾಕಿ ಮತ್ತೆ ಐದು ನಿಮಿಷ ಒಲೆಯಲ್ಲಿಟ್ಟು ಕೆಳಗಿಳಿಸಿ. ಬಿಸಿ ಬಿಸಿ ರೋಟಿಯೊಂದಿಗೆ ಎಗ್ ಕರಿ ಬಡಿಸಿ.