ಬೇಕಾಗುವ ಸಾಮಾನುಗಳು: ನಾಲ್ಕು ಮೊಟ್ಟೆ ,ಒಂದು ಈರುಳ್ಳಿ ಸ ಎರಡು ಹಸಿರು ಮೆಣಸು ಅರ್ಧ ಇಂಚು ಶುಂಠಿ , ಎರಡು ಬೆಳ್ಳೊಳ್ಳಿ ಎಸಳು, ಒಂದು ಚಮಚ ಗರಂ ಮಸಾಲಾ 3 ಚಮಚ ಎಣ್ಣೆ ,ಪೆಪ್ಪರ್ ಮತ್ತು ರುಚಿಗೆ ತಕ್ಕಂತೆ ಉಪ್ಪು.
ಮಾಡುವ ವಿಧಾನ: ಈರುಳ್ಳಿ ,ಶುಂಠಿ , ಬೆಳ್ಳುಳ್ಳಿ ,ಹಸಿಮೆಣಸು ಸಣ್ಣದಾಗಿ ಹಚ್ಚಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಕಾದ ನಂತರ ಕತ್ತರಿಸಿದ ಪದಾರ್ಥಗಳನ್ನು ಸೇರಿಸಿ. ಬಂಗಾರದ ಬಣ್ಣಬರುವವರೆಗೆ ತಿರುಗಿಸಿ .ಇದಕ್ಕೆ ಮೊಟ್ಟೆ ಗರಂ ಮಸಾಲೆ ಪೆಪ್ಪರ್ ಹಾಗೂ ಉಪ್ಪು ಸೇರಿಸಿ ತಿರುಗಿಸಿ. ಅದು ಮಿಕ್ಸ್ ಆಗುವವರೆಗೆ ಚೆನ್ನಾಗಿ ತಿರುಗಿಸುತ್ತಾ ಇರಬೇಕು. ನಂತರ ಅವುಗಳು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ಇದನ್ನು ರೊಟ್ಟಿ ಅಥವಾ ಬ್ರೆಡ್ ಜೊತೆ ಸವಿಯಬಹುದಾಗಿದೆ.