Webdunia - Bharat's app for daily news and videos

Install App

ಮಟನ್ ಕೈಮಾ ಉಂಡೆ ಸಾಂಬಾರ್, ಈ ರುಚಿ ನಾಲಿಗೆ ಎಂದೂ ಮರೆಯದು!

Webdunia
ಶುಕ್ರವಾರ, 31 ಡಿಸೆಂಬರ್ 2021 (12:20 IST)
ಚಳಿಗಾಲದ ಸಂದರ್ಭದಲ್ಲಿ ನಾಲಿಗೆಯು ರುಚಿ ರುಚಿಯಾದ ಖಾದ್ಯವನ್ನು ಸೇವಿಸಲು ಬಯಸುತ್ತದೆ.

ನಾನ್ವೆಜ್ ಪ್ರಿಯರಿಗಂತು ನಾನ್ವೆಜ್ ಪದಾರ್ಥಗಳ ಪರಿಮಳ ಮೂಗಿಗೆ ಸೋಕಿದಾಗ ಬಾಯಲ್ಲಿ ನೀರೂರುತ್ತದೆ.


ಹಾಗಾದ್ರೆ ಮಟನ್ ಕೈಮಾ ಉಂಡೆ ಸಾಂಬಾರ್ ನ್ನು ನೀವು ಎಂದಾದರೂ ಊಟ, ರೊಟ್ಟಿಗೆ ಹಾಕಿ ತಿಂದಿದ್ದೀರಾ? ಈ ಮಟನ್ ಕೈಮಾ ಉಂಡೆ ಸಾಂಬಾರು ಮಾಡುವ ವಿಧಾನ ನಿಮಗಾಗಿ.

ಬೇಕಾಗುವ ಸಾಮಾಗ್ರಿಗಳು

 * ಮಟನ್ – 500 ಗ್ರಾಂ
* ಮಟನ್ ಮೂಳೆ
* ಕೊತ್ತಂಬರಿ ಪುಡಿ – 1 ಚಮಚ
* ಕೊಬ್ಬರಿ – ಸ್ವಲ್ಪ
* ಬೆಳ್ಳುಳ್ಳಿ – 1
* ಖಾರದ ಪುಡಿ – 1 ಚಮಚ
* ಕರಿಮೆಣಸು – ಸ್ವಲ್ಪ
* ಚಕ್ಕೆ – 4
* ಲವಂಗ – 4
* ಮೊಟ್ಟೆ – 1
* ಕರಿಕಡಲೆ – ಸ್ವಲ್ಪ
* ತೆಂಗಿನ ಕಾಯಿ – 1
* ಈರುಳ್ಳಿ – 1
* ಬೆಳ್ಳುಳ್ಳಿ – 1
* ಟೊಮೆಟೋ – 1
* ಗಸಗಸೆ – ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಎಣ್ಣೆ ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು

 ಮಾಡುವ ವಿಧಾನ

* ಮೊದಲಿಗೆ ಮಟನ್, ಮಟನ್ ಮೂಳೆ, ಬೆಳ್ಳುಳ್ಳಿ, ಕೊತ್ತಂಬರಿ ಪುಡಿ, ಕೊಬ್ಬರಿ, ಕರಿಮೆಣಸು, ಚಕ್ಕೆ, ಲವಂಗ ಪದಾರ್ಥಗಳನ್ನು ನೀರು ಹಾಕದೇ ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಮೊಟ್ಟೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. 

* ಕರಿಕಡಲೆಯನ್ನು ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು.

* ನಂತರ ಪಾತ್ರೆಗೆ ಕೈಮಾ, ರುಬ್ಬಿಕೊಂಡ ಮಸಾಲೆಯನ್ನು ಹುರಿಕಡಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.

* ನಂತರ ಕುಕ್ಕರನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿಕೊಳ್ಳಬೇಕು. 

* ಬಳಿಕ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಟೊಮೆಟೋ, ಗಸಗಸೆ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.

* ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಬೇಕು.

* ಕುದಿಯುತ್ತಿರುವ ಮಸಾಲೆಗೆ ಈಗಾಗಲೇ ಮಾಡಿಟ್ಟಿರುವ ಉಂಡೆಗಳನ್ನು ಹಾಕಿ 10-15 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕೈಮಾ ಉಂಡೆ ಸಾರು ಸಿದ್ಧವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments