Webdunia - Bharat's app for daily news and videos

Install App

ಮಾಂಸ ಬೆಂಡೆಕಾಯಿ ಪಲ್ಯ

Webdunia
ಬೇಕಾಗುವ ಸಾಮಾಗ್ರಿಗಳು
ಮಾಂಸ
ಬೆಂಡೆಕಾಯಿ
ಎಣ್ಣೆ
ದಾಲ್ಚಿನಿ
ಏಲಕ್ಕಿ
ಲವಂಗ
ಕರಿಬೇವು ಎಲೆಗಳು
ಸಾಸಿವೆ
ಪೇಸ್ಚ್ ಮಾಡಿದ ಈರುಳ್ಳಿ
ಪೇಸ್ಟ್ ಮಾಡಿದ ಬೆಳ್ಳುಳ್ಳಿ-ಶುಂಠಿ
ಪೇಸ್ಟ್ ಮಾಡಿದ ತೆಂಗಿನ ಚೂರುಗಳು
ಜೀರಿಗೆ ಪುಡಿ
ಅರಸಿನ
ಮೆಣಸಿನ ಪುಡಿ
ಧನಿಯಾ ಪುಡಿ
ಟೊಮೇಟೋದ ಪೇಸ್ಟ್
ಉಪ್ಪು, ನೀರು,
ಹುಣಸೆಹಣ್ಣಿನ ರಸ ಮತ್ತು .

ಮಾಡುವ ವಿಧಾನ

ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆ ಕಾಯಿಸಿ ಸಂಬಾರ ಪದಾರ್ಥಗಳೊಂದಿಗೆ ಸಾಸಿವೆ ಮತ್ತು ಕರಿಬೇವು ಎಲೆಗಳನ್ನು ಸೇರಿಸಿ.ಸಾಸಿವೆ ಸಿಡಿದಲ್ಲಿ ಈರುಳ್ಳಿ ಪೇಸ್ಟ್ ಸೇರಿಸಿ ಹದವಾಗಿ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು.ಅದರಂತೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ನ್ನೂ ಹುರಿಯಬೇಕು.ಬಳಿಕ ಅದಕ್ಕೆ ಜೀರಿಗೆ ಪುಡಿ ಅರಿಸಿನ, ಮೆಣಸಿನ ಪುಡಿ, ಧನಿಯಪುಡಿ ಮತ್ತು ಟೊಮೇಟೋಗಳನ್ನು ಹಾಕಿ 3 ನಿಮಿಷಗಳವರೆಗೆ ಹುರಿಯಬೇಕು.ಹಸಿ ಮಾಂಸದ ತುಂಡಿಗೆ ಉಪ್ಪು ಮತ್ತು 3 ಬಟ್ಟಲು ನೀರು ಸೇರಿಸಿ ಕಲಕಿ 10 ನಿಮಿಷಗಳ ಕಾಲ ಕುಕ್ಕರ್‌ನ ಸಹಾಯದಿಂದ ಬೇಯಿಸಬೇಕು.ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂಡೆಕಾಯಿ ಹೋಳುಗಳನ್ನು ಹಾಕಿ ಪುನಃ 4 ನಿಮಿಷ ಬೇಯಿಸಬೇಕು.ಬೆಂಡೆಕಾಯಿ ಬೆಂದ ನಂತರ ಹುಣಸೆ ರಸ ಮತ್ತು ಪೇಸ್ಟ್ ಮಾಡಿದ ತೆಂಗಿನ ತುರಿಯನ್ನು ಹಾಕಿ 2 ನಿಮಿಷದ ನಂತರ ಒಲೆಯ ಮೇಲಿಂದ ಮರಳಿಸಿ. ಈಗ ಮಾಂಸದ ಬೆಂಡೆಕಾಯಿ ಪಲ್ಯ ರೆಡಿ. ಇದನ್ನು ರೊಟ್ಟಿ ಅಥವಾ ಅನ್ನದೊಂದಿಗೆ ಸೇರಿಸಿ ತಿನ್ನಲು ಬಲು ರುಚಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ

ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸಲು ಈ 5 ಚಟುವಟಿಕೆಗಳು ಬೆಸ್ಟ್‌

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Show comments