ಬೇಕಾಗುವ ಸಾಮಾಗ್ರಿಗಳು
ಮಾಂಸ
ಬೆಂಡೆಕಾಯಿ
ಎಣ್ಣೆ
ದಾಲ್ಚಿನಿ
ಏಲಕ್ಕಿ
ಲವಂಗ
ಕರಿಬೇವು ಎಲೆಗಳು
ಸಾಸಿವೆ
ಪೇಸ್ಚ್ ಮಾಡಿದ ಈರುಳ್ಳಿ
ಪೇಸ್ಟ್ ಮಾಡಿದ ಬೆಳ್ಳುಳ್ಳಿ-ಶುಂಠಿ
ಪೇಸ್ಟ್ ಮಾಡಿದ ತೆಂಗಿನ ಚೂರುಗಳು
ಜೀರಿಗೆ ಪುಡಿ
ಅರಸಿನ
ಮೆಣಸಿನ ಪುಡಿ
ಧನಿಯಾ ಪುಡಿ
ಟೊಮೇಟೋದ ಪೇಸ್ಟ್
ಉಪ್ಪು, ನೀರು,
ಹುಣಸೆಹಣ್ಣಿನ ರಸ ಮತ್ತು .
ಮಾಡುವ ವಿಧಾನ
ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆ ಕಾಯಿಸಿ ಸಂಬಾರ ಪದಾರ್ಥಗಳೊಂದಿಗೆ ಸಾಸಿವೆ ಮತ್ತು ಕರಿಬೇವು ಎಲೆಗಳನ್ನು ಸೇರಿಸಿ.ಸಾಸಿವೆ ಸಿಡಿದಲ್ಲಿ ಈರುಳ್ಳಿ ಪೇಸ್ಟ್ ಸೇರಿಸಿ ಹದವಾಗಿ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು.ಅದರಂತೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ನ್ನೂ ಹುರಿಯಬೇಕು.ಬಳಿಕ ಅದಕ್ಕೆ ಜೀರಿಗೆ ಪುಡಿ ಅರಿಸಿನ, ಮೆಣಸಿನ ಪುಡಿ, ಧನಿಯಪುಡಿ ಮತ್ತು ಟೊಮೇಟೋಗಳನ್ನು ಹಾಕಿ 3 ನಿಮಿಷಗಳವರೆಗೆ ಹುರಿಯಬೇಕು.ಹಸಿ ಮಾಂಸದ ತುಂಡಿಗೆ ಉಪ್ಪು ಮತ್ತು 3 ಬಟ್ಟಲು ನೀರು ಸೇರಿಸಿ ಕಲಕಿ 10 ನಿಮಿಷಗಳ ಕಾಲ ಕುಕ್ಕರ್‌ನ ಸಹಾಯದಿಂದ ಬೇಯಿಸಬೇಕು.ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂಡೆಕಾಯಿ ಹೋಳುಗಳನ್ನು ಹಾಕಿ ಪುನಃ 4 ನಿಮಿಷ ಬೇಯಿಸಬೇಕು.ಬೆಂಡೆಕಾಯಿ ಬೆಂದ ನಂತರ ಹುಣಸೆ ರಸ ಮತ್ತು ಪೇಸ್ಟ್ ಮಾಡಿದ ತೆಂಗಿನ ತುರಿಯನ್ನು ಹಾಕಿ 2 ನಿಮಿಷದ ನಂತರ ಒಲೆಯ ಮೇಲಿಂದ ಮರಳಿಸಿ. ಈಗ ಮಾಂಸದ ಬೆಂಡೆಕಾಯಿ ಪಲ್ಯ ರೆಡಿ. ಇದನ್ನು ರೊಟ್ಟಿ ಅಥವಾ ಅನ್ನದೊಂದಿಗೆ ಸೇರಿಸಿ ತಿನ್ನಲು ಬಲು ರುಚಿ.