ಬೇಕಾಗುವ ಸಾಮಾಗ್ರಿಗಳು
2 ಕೆ.ಜಿ. ಕೋಳಿಮಾಂಸ
2 ಕಪ್ ತೊಗರಿಬೇಳೆ
3 ಈರುಳ್ಳಿ, ಟೊಮಾಟೊ
ಹುಣಸೇ ಹುಳಿ
ಮಸಾಲೆ ಮಾಡಲು -
20 ಮೆಣಸು
25 ಕರಿಮೆಣಸು
2 ಟೀಸ್ಪೂನ್ ಕಡಲೆ, ಜೀರಿಗೆ ಪುಡಿ, ಶುಂಠಿ ಪೇಸ್ಟ್
6 ಹಸಿರು ಮೆಣಸು
5 ಎಸಳು ಬೆಳ್ಳುಳ್ಳಿ
10 ಏಲಕ್ಕಿ
ತಯಾರಿಸುವ ವಿಧಾನ:
ಮಸಾಲೆಯ ಎಲ್ಲಾ ಪದಾರ್ಥಗಳನ್ನು ರುಬ್ಬಿ ಪೇಸ್ಟ್ ರೆಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ತೊಗರಿಬೇಳೆಯ ಬೇಯಿಸಿ. ಅದಕ್ಕೆ ಉಪ್ಪು, ಒಂದು ಕತ್ತರಿಸಿದ ಈರುಳ್ಳಿ ಹಾಕಿ ಬೇಳೆ ಚೆನ್ನಾಗಿ ಬೇಯುವವರೆಗೆ ಬೇಯಿಸಿ. ಮಾಂಸವನ್ನು ತೊಳೆದು, ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಸ್ವಲ್ಪ ನೀರು, ಕತ್ತರಿಸಿದ ಈರುಳ್ಳಿ ಹಾಕಿ ಮಾಂಸವನ್ನು ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಹುರಿಯಿರಿ. ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಹುರಿಯಿರಿ. ಟೊಮಾಟೊ, ಬೇಳೆ, ಮಾಂಸವನ್ನು ಹಾಕಿ ಕಲಸಿ, ಸುಮಾರು 10 ನಿಮಿಷಗಳವರೆಗೆ ಬೇಯಿಸಿ. ಒಲೆಯಿಂದ ತೆಗೆಯುವ ಮೊದಲು ಹುಣಸೇ ಹುಳಿಯನ್ನು ಸೇರಿಸಿ ಕಲಸಿ. ಅನ್ನ ಅಥವಾ ಅಕ್ಕಿ ರೊಟ್ಟಿಯೊಂದಿಗೆ ತಿನ್ನಲು ನೀಡಿ.