Select Your Language

Notifications

webdunia
webdunia
webdunia
webdunia

ಬಾಯಿಚಪ್ಪರಿಸುವಂತೆ ಮಾಡುವ ಫ್ರಾನ್ಸ್ ಫ್ರೈ

ಬಾಯಿಚಪ್ಪರಿಸುವಂತೆ ಮಾಡುವ ಫ್ರಾನ್ಸ್ ಫ್ರೈ
ND
ಫ್ರಾನ್ಸ್ (ಸಿಗಡಿ ಮೀನು) ಖಾದ್ಯಗಳು ನಾಲಿಗೆಗೆ ನೀಡುವ ಮುದ ಮತ್ತು ಮಜವೇ ಬೇರೆ. ಸಿಗಡಿ ಮೀನಿನ ತರಾವರಿ ಅಡುಗೆ ಮಾಡಬಹುದಾಗಿದೆ. ಟೊಮ್ಯಾಟೊ ಬಳಸಿ ಇದನ್ನು ಹುರಿಯುವ ವಿಧಾನ ಹೇಗೆಂದು ಗೊತ್ತಾ?

ಗೊತ್ತಿಲ್ಲವಾದರೆ ಇಲ್ಲಿ ಬನ್ನಿ
ಈ ಫ್ರಾನ್ಸ್ ಫ್ರೈ ಮಾಡಲು ಅರ್ಧ ಕೇಜಿ ಫ್ರಾನ್, 2 ಚಮಚ ಅಡುಗೆ ಎಣ್ಣೆ, ಒಂದು ಮಧ್ಯಮ ಗಾತ್ರದ ಈರುಳ್ಳಿ, ಒಂದೂವರೆ ಟೀ ಚಮಚ ಅಚ್ಚಮೆಣಸಿನ ಪುಡಿ, ಅರ್ಧ ಟೀ ಚಮಚ ಜೀರಿಗೆ ಪುಡಿ, 5 ಎಸಳು ಬೆಳ್ಳುಳ್ಳಿ, ಎರಡು ಮಧ್ಯಮಗಾತ್ರದ ಟೊಮ್ಯಾಟೊ, ಉಪ್ಪು ರುಚಿಗೆ, ಒಂದು ಟೇಬಲ್ ಚಮಚ ಕೊತ್ತಂಬರಿ ಸೊಪ್ಪು ಒಟ್ಟುಮಾಡಿಟ್ಟುಕೊಳ್ಳಿ.

ಬಳಿಕ
ಒಂದು ಪಾತ್ರೆಯಲ್ಲಿ ಸ್ವಚ್ಛಗೊಳಿಸಿದ ಸಿಗಡಿ ಮೀನನ್ನು ಸ್ಪಲ್ಪವೇ ನೀರು ಮತ್ತು ಆರ್ಧ ಟೀ ಚಮಚ ಉಪ್ಪು ಬೆರೆಸಿ ಐದೇ ನಿಮಿಷ ಬೇಯಿಸಿ. ನೀರು ಆವಿಯಾಗುತ್ತಿರುವಂತೆ ಕೆಳಗಿರಿಸಿ.

ಬಣಲೆ ಅಥವಾ ಅಗಲ ಪಾತ್ರೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆಕಾಯಿಸಿ. ಈ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಜೀರಿಗೆ ಪುಡಿ, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಚೆನ್ನಾಗಿ ಹೊಂದಿಕೊಂಡ ಬಳಿಕ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಹುರಿಯಿರಿ.

ಎಲ್ಲವೂ ಚೆನ್ನಾಗಿ ಹೊಂದಿಕೊಂಡ ಬಳಿಕ ಬೇಯಿಸಿಟ್ಟ ಸಿಗಡಿ ಮೀನು ಸೇರಿಸಿ. ಮಿಕ್ಸ್ ಮಾಡಿ. ಅದಾದ ಮೇಲೆ ಬೇಕಷ್ಟು ಉಪ್ಪು ಹಾಗೂ ಬೇಕಿದ್ದರೆ ಸ್ವಲ್ಪ ಗರಂ ಮಸಾಲೆ ಸೇರಿಸಿ. ಚೆನ್ನಾಗಿ ಕೈಯಾಡಿಸಿ ಎರಡು ನಿಮಿಷದ ಬಳಿಕ ಚಿಕ್ಕದಾಗಿ ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. ಬಿಸಿಬಿಸಿ ಸೇವಿಸಿದರೆ ಒಂದು ಹಿಡಿ ರುಚಿ ಹೆಚ್ಚು.

ಇದನ್ನು ಅನ್ನ ಹಾಗೂ ಪರೋಟ, ಚಪಾತಿ ಜತೆ ತಿನ್ನಲೂ ಚೆನ್ನಾಗಿರುತ್ತದೆ.

Share this Story:

Follow Webdunia kannada