Webdunia - Bharat's app for daily news and videos

Install App

ಫ್ರಾನ್ಸ್ ಫ್ರೈ

Webdunia
ಬೇಕಾಗುವ ಸಾಮಾನ ು

ಅರ್ಧ ಕೇಜಿ ಫ್ರಾನ್
2 ಚಮಚ ಅಡುಗೆ ಎಣ್ಣೆ
ಒಂದು ಮಧ್ಯಮ ಗಾತ್ರದ ಈರುಳ್ಳಿ
ಒಂದೂವರೆ ಟೀ ಚಮಚ ಅಚ್ಚಮೆಣಸಿನ ಪುಡಿ
ಅರ್ಧ ಟೀ ಚಮಚ ಜೀರಿಗೆ ಪುಡಿ
5 ಎಸಳು ಬೆಳ್ಳುಳ್ಳಿ
ಎರಡು ಮಧ್ಯಮಗಾತ್ರದ ಟೊಮ್ಯಾಟೊ
ಉಪ್ಪು ರುಚಿಗೆ
ಒಂದು ಟೇಬಲ್ ಚಮಚ ಕೊತ್ತಂಬರಿ ಸೊಪ್ಪು ಒಟ್ಟುಮಾಡಿಟ್ಟುಕೊಳ್ಳಿ.

ಪಾಕ ವಿಧಾನ:

ಒಂದು ಪಾತ್ರೆಯಲ್ಲಿ ಸ್ವಚ್ಛಗೊಳಿಸಿದ ಸಿಗಡಿ ಮೀನನ್ನು ಸ್ಪಲ್ಪವೇ ನೀರು ಮತ್ತು ಆರ್ಧ ಟೀ ಚಮಚ ಉಪ್ಪು ಬೆರೆಸಿ ಐದೇ ನಿಮಿಷ ಬೇಯಿಸಿ. ನೀರು ಆವಿಯಾಗುತ್ತಿರುವಂತೆ ಕೆಳಗಿರಿಸಿ. ಬಣಲೆ ಅಥವಾ ಅಗಲ ಪಾತ್ರೆಯಲ್ಲಿ ಎರಡು ಟೇಬಲ್ ಚಮಚ ಎಣ್ಣೆಕಾಯಿಸಿ. ಈ ಎಣ್ಣೆಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಜೀರಿಗೆ ಪುಡಿ, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಚೆನ್ನಾಗಿ ಹೊಂದಿಕೊಂಡ ಬಳಿಕ ಕತ್ತರಿಸಿದ ಟೊಮ್ಯಾಟೊ ಸೇರಿಸಿ ಹುರಿಯಿರಿ. ಎಲ್ಲವೂ ಚೆನ್ನಾಗಿ ಹೊಂದಿಕೊಂಡ ಬಳಿಕ ಬೇಯಿಸಿಟ್ಟ ಸಿಗಡಿ ಮೀನು ಸೇರಿಸಿ. ಮಿಕ್ಸ್ ಮಾಡಿ. ಅದಾದ ಮೇಲೆ ಬೇಕಷ್ಟು ಉಪ್ಪು ಹಾಗೂ ಬೇಕಿದ್ದರೆ ಸ್ವಲ್ಪ ಗರಂ ಮಸಾಲೆ ಸೇರಿಸಿ. ಚೆನ್ನಾಗಿ ಕೈಯಾಡಿಸಿ ಎರಡು ನಿಮಿಷದ ಬಳಿಕ ಚಿಕ್ಕದಾಗಿ ಕತ್ತರಿಸಿಟ್ಟ ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. ಬಿಸಿಬಿಸಿ ಸೇವಿಸಿದರೆ ಒಂದು ಹಿಡಿ ರುಚಿ ಹೆಚ್ಚು. ಇದನ್ನು ಅನ್ನ ಹಾಗೂ ಪರೋಟ, ಚಪಾತಿ ಜತೆ ತಿನ್ನಲೂ ಚೆನ್ನಾಗಿರುತ್ತದೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ

ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸಲು ಈ 5 ಚಟುವಟಿಕೆಗಳು ಬೆಸ್ಟ್‌

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Show comments