ಬೇಕಾಗುವ ಸಾಮಾನುಗಳು: ಮೀನು, ಈರುಳ್ಳಿ, ಕೊತ್ತಂಬರಿ,ಮಣಸಿನಕಾಯಿ, ಹುಣಸೆ ರಸ, ಅರಸಿನ ಪುಡಿ, ಗೋಡಂಬಿ, ತುಪ್ಪ, ಕರಿಬೇವು, ದಾಲ್ಚೀನಿ.
ಮಾಡುವ ವಿಧಾನ: ಮೇಲಿನ ಎಲ್ಲ ಮಸಾಲೆಯನ್ನು ಚೆನ್ನಾಗಿ ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿದು ರುಬ್ಬಿಕೊಳ್ಳಿ. ಬಣಾಲೆಯಲ್ಲಿ ಎಲ್ಲವನ್ನು ಸ್ವಲ್ಪ ಕೂಡಿಸಿಕೊಂಡು ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕರಿಯಿರಿ. ಮೀನಿನಲ್ಲ್ಲಿದ್ದ ಎಲ್ಲಾ ಮುಳ್ಳುಗಳನ್ನು ತೆಗೆದು ಎಣ್ಣೆಯಲ್ಲಿ ಕರಿಯಿರಿ. ಸಣ್ಣಗೆ ಕತ್ತರಿಸಿಕೊಂಡು ಅಥವಾ ಕೈಯಿಂದ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿಕೊಳ್ಳಬಹುದು. ಮೇಲಿನ ಎಲ್ಲಾ ಮಸಾಲೆಯನ್ನು ಚೆನ್ನಾಗಿ ಸೇರಿಸಿಕೊಳ್ಳಿ. ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ. ಗರಂ ಮಸಾಲ ಮತ್ತು ಖಾರದ ಪುಡಿಯನ್ನು ಸಹ ಸೇರಿಸಿಕೊಳ್ಳಿ. ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.