ಮೀನನ್ನು ಶುಚಿಗೊಳಿಸಿ ಅದಕ್ಕೆ ಅರಶಿನ ಮತ್ತು ಉಪ್ಪು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ. ಮೀನು ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಮೀನಿಗೆ ಸವರಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಕರಿದ ಮೀನಿನ ಮೇಲೆ ನಿಂಬೆರಸ ಮತ್ತು ಚಾಟ್ ಮಸಾಲಾ ಸಿಂಪಡಿಸಿ.