ಬೇಕಾಗುವ ಸಾಮಾನುಗಳು: ಕೀಮಾ (ಮಾಂಸ), ಎಣ್ಣೆ, ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಮೆಣಸಿನ ಪುಡಿ, ಟೊಮೇಟೋ, 8 ಟೇಬಲ್ ಟೀ ಚಮಚ ಬಿಳಿ ನೆನೆ ಹಾಕಿದ ಕಾಬೂಲ್ ಕಡಲೆ, ಉಪ್ಪು, ಹುಣಸೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು.
ತಯಾರಿಸುವ ವಿಧಾನ: 6 ಚಮಚ ಎಣ್ಣೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕಾಯಿಸಿ ಪೇಸ್ಟ್ ಮಾಡಿದ ಈರುಳ್ಳಿಯನ್ನೂ ಸೇರಿಸಿ ಕಮದು ಬಣ್ಣ ಬರುವವರೆಗೆ ಕದಡುತ್ತಿರಬೇಕು.ಇದೇ ರೀತಿ ಬೆಳ್ಳುಳ್ಳಿ-ಶುಂಠಿಯನ್ನು, ಜೀರಿಗೆ ಪುಡಿ, ಅರಸಿನ ಪುಡಿ, ಮೆಣಸಿನ ಪುಡಿಗಳನ್ನು ಟೊಮೇಟೋ ಪೇಸ್ಟ್‌ನೊಂದಿಗೆ ಸೇರಿಸಿ 3ರಿಂದ 5 ನಿಮಿಷದವರೆಗೆ ಹುರಿಯಬೇಕು.ನಂತರ ಕೀಮಾ ಸೇರಿಸಿ ಚೆನ್ನಾಗಿ ಕಲಕಿದ ಮೇಲೆ ಒಂದು ಬಟ್ಟಲಾಗುವಷ್ಟು ನೆನೆಹಾಕಿದ ಕಡಲೆಯನ್ನು ನೀರಿನೊಂದಿಗೆ ಸೇರಿಸಿ.10 ನಿಮಿಷಗಳ ಕಾಲ ಇದನ್ನು ಒತ್ತಡದಲ್ಲಿ ಕುಕ್ಕರ್ನಲ್ಲಿ ಬೇಯಿಸಬೇಕು.ನಂತರ ಮುಚ್ಚಳ ತೆಗೆದು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆ ಹಣ್ಣಿನ ರಸವನ್ನು ಮಿಕ್ಸ್ ಮಾಡಬೇಕು.ಒಂದು ನಿಮಿಷದ ನಂತರ ಗರಂ ಮಸಾಲ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿದಲ್ಲಿ ಕೀಮಾ ಕಡಲೆ ಪಲ್ಯ ರೆಡಿ.