ಬೇಕಾಗುವ ಸಾಮಗ್ರಿ: ಚೆನ್ನಾಗಿ ಬೇಯಿಸಿದ 6 ಮೊಟ್ಟೆ, ಉದ್ದುದ್ದಕ್ಕೆ ಕತ್ತರಿಸಿದ ಮೂರು ಈರುಳ್ಳಿ, ಉದ್ದಕ್ಕೆ ಕತ್ತರಿಸಿದ ಐದಾರು ಹಸಿಮೆಣಸು, ಒಂದು ಚಮಚ ಜೋಳದ ಹಿಟ್ಟು, ಎರಡು ಚಮಚ ಸೋಯಾ ಸಾಸ್, ಒಂದು ಚಮಚ ವಿನೆಗರ್, ಕಾಲು ಚಮಚ ಸಕ್ಕರೆ, ಉಪ್ಪು, ಎಣ್ಣೆ.
ಮಾಡುವ ವಿಧಾನ: ಉದ್ದುದ್ದಕ್ಕೆ ಬೇಯಿಸಿದ ಮೊಟ್ಟೆಯ ಸ್ಲೈಸ್‌ಗಳನ್ನಾಗಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಹದ ಉರಿಯಲ್ಲಿ ತಿರುವುತ್ತಲೇ ಇರಿ. ಜೋಳದ ಹಿಟ್ಟಿಗೆ ನೀರು ಹಾಕಿ ಕಲಸಿ ನುಣ್ಣಗಿರುವಂತೆ ಕಲಸಿಡಿ. ಈರುಳ್ಳಿಗೆ ಜೋಳದ ಹಿಟ್ಟು, ಸೋಯಾ ಸಾಸ್, ವಿನೆಗರ್, ಸಕ್ಕರೆ, ಉಪ್ಪು ಹಾಕಿ ಕಲಸಿ. ನಂತರ ಅದಕ್ಕೆ ಮೊಟ್ಟೆ ಹಾಗೂ ಹಸಿಮೆಣಸು ಹಾಕಿ. ಅದನ್ನು ಪಾತ್ರೆಯಲ್ಲಿ ಒಲೆಯಲ್ಲಿಟ್ಟು ಚೆನ್ನಾಗಿ ಕಲಸುತ್ತಾ ಆಮೇಲೆ ಕೆಳಗಿಳಿಸಿ.