Publish Date: Sat, 05 Aug 2017 (09:39 IST)
Updated Date: Sat, 05 Aug 2017 (09:43 IST)
ನವದೆಹಲಿ: ನೋಟು ನಿಷೇಧ ಮಾಡುವುದರಿಂದ ದೇಶದಲ್ಲಿ ಕಪ್ಪು ಹಣ ದಂಧೆ ನಿಲ್ಲಲಿದೆ. ನಿರುದ್ಯೋಗಿಗಳಿಗೆ ಸಿಗಲಿದೆ ಎನ್ನುತ್ತಿದ್ದಿರಿ. ಎಲ್ಲಿದೆ ಉದ್ಯೋಗ ಮಿ. ಜೇಟ್ಲಿ? ಹೀಗಂತ ಪ್ರತಿಪಕ್ಷ ಕಾಂಗ್ರೆಸ್ ಸಚಿವರಿಗೆ ಪತ್ರ ಬಹಿರಂಗ ಪತ್ರ ಬರೆದಿದೆ.
ನಿಮ್ಮ ನೋಟು ನಿಷೇಧದ ನಿರ್ಧಾರದಿಂದ 15 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬಂದಾಗಿನಿಂದ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ಸಮೀಕ್ಷಾ ವರದಿಗಳೇ ಇದನ್ನು ದೃಢಪಡಿಸಿವೆ.
ಹಾಗಿದ್ದರೆ ನೀವು ಹೇಳಿದಂತೆ ಉದ್ಯೋಗ ಸೃಷ್ಟಿಯಾಗಿದ್ದು ಎಲ್ಲಿ? ಎಂದು ಪ್ರಶ್ನಿಸಿದೆ. ಈ ಪತ್ರವನ್ನು ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ನಿಭಾಯಿಸುತ್ತಿರುವ ರಮ್ಯಾ ತಮ್ಮ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.