Publish Date: Tue, 26 Sep 2017 (09:00 IST)
Updated Date: Tue, 26 Sep 2017 (09:02 IST)
ನವದೆಹಲಿ: ಪದೇ ಪದೇ ಗಡಿಯಲ್ಲಿ ತಕರಾರು ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಕ್ಕ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿ ತೋರಿಸುತ್ತಿದ್ದರೆ, ಇನ್ನೂ ಬುದ್ಧಿ ಕಲಿಯದಿದ್ದರೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅನಿವಾರ್ಯವಾಗುತ್ತದೆ ಎಂದು ರಾವತ್ ಖಡಕ್ ಆಗಿ ಎಚ್ಚರಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 28 ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿಯೊಳಗೆ ನುಗ್ಗಿ ಹಲವು ಉಗ್ರರನ್ನು ಸದೆಬಡಿದು ಬಂದಿತ್ತು. ಇದು ಉರಿ ದಾಳಿಯ ನಂತರ ಸಿಟ್ಟಿಗೆದ್ದ ಭಾರತದ ಕ್ರಮವಾಗಿತ್ತು. ಇದಕ್ಕೆ ವಿಶ್ವವೇ ಬೆಚ್ಚಿಬಿದ್ದಿತ್ತು. ಇದೀಗ ಪದೇ ಪದೇ ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಗೆ ತಕ್ಕ ಎದಿರೇಟು ಕೊಡಲು ಅದೇ ಅಸ್ತ್ರ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಸೇನಾ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ