Select Your Language

Notifications

webdunia
webdunia
webdunia
webdunia

‘ದಿನಕ್ಕೆ 20 ಗಂಟೆ ಕೆಲಸ ಮಾಡದಿದ್ದರೆ ಗಂಟು ಮೂಟೆ ಕಟ್ಟಿ’

‘ದಿನಕ್ಕೆ 20 ಗಂಟೆ ಕೆಲಸ ಮಾಡದಿದ್ದರೆ ಗಂಟು ಮೂಟೆ ಕಟ್ಟಿ’
Luknow , ಸೋಮವಾರ, 27 ಮಾರ್ಚ್ 2017 (10:44 IST)
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲೆ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ದಿನದಲ್ಲಿ 20 ಗಂಟೆ ಕೆಲಸ ಮಾಡಲು ಸಿದ್ಧರಿಲ್ಲದಿದ್ದರೆ, ಮನೆಗೆ ಗಂಟು ಮೂಟೆ ಕಟ್ಟಿ ಎಂದು ಹೊಸದಾಗಿ ಸಿಎಂ ಸಾಹೇಬರು ಫರ್ಮಾನು ಹೊರಡಿಸಿದ್ದಾರೆ.

 

‘ದಿನಕ್ಕೆ 18-20 ಗಂಟೆ ಕೆಲಸ ಮಾಡಲು ರೆಡಿ ಇರುವ ಅಧಿಕಾರಿಗಳಿಗೆ ಸ್ವಾಗತ. ಇಲ್ಲದವರು ಮನೆಗೆ ಹೊರಡಲು ಸಿದ್ಧತೆ ಮಾಡಿಕೊಳ್ಳಬಹುದು’ ಎಂದು ಸಿಎಂ ಯೋಗಿ ಖಡಕ್ಕಾಗಿ ಹೇಳಿದ್ದಾರೆ. ಅನಧಿಕೃತ ಮಾಂಸದಂಗಡಿಗಳನ್ನು ನಿಷೇಧಿಸಿ ಪ್ರತಿಭಟನೆ ನಡೆಯುತ್ತಿರುವಾಗ ಕ್ಯಾರೇ ಎನ್ನದೆ ಸಿಎಂ ಯೋಗಿ ತಮ್ಮ ಖಡಕ್ ಕೆಲಸಗಳನ್ನು ಮುಂದುವರಿಸಿದ್ದಾರೆ.

 
ಮೊನ್ನೆಯಷ್ಟೇ ಕೆಲಸ ಮಾಡದ 100 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ಸಿಎಂ ಗೋರಖ್ ಪುರದಲ್ಲಿ ಮಾತನಾಡುತ್ತಾ ‘ನಾನು ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ಅಧಿಕಾರಿಗಳು ಅವುಗಳನ್ನು ಜಾರಿಗೆ ತರಬೇಕು. ಜನರಿಗಾಗಿ ಮಾನವೀಯತೆಯಿಂದ ಕೆಲಸ ಮಾಡಲು ಕಲಿಯಬೇಕು’ ಎಂದು ಸಂದೇಶ ನೀಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯರನ್ನು ವಿಮಾನದಿಂದ ಹೊರದಬ್ಬಿದ ಸಿಬ್ಬಂದಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!