Select Your Language

Notifications

webdunia
webdunia
webdunia
webdunia

ಸಿಎಂ ಪುತ್ರರ ಟ್ರಸ್ಟ್‌ಗೆ ಕೋಟ್ಯಂತರ ಹಣ ಸಂದಾಯ: ಎಚ್‌ಡಿಕೆ

ಕುಮಾರಸ್ವಾಮಿ
ನವದೆಹಲಿ , ಬುಧವಾರ, 9 ಮಾರ್ಚ್ 2011 (17:23 IST)
PTI
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರಿಗೆ ಸೇರಿದ ಪ್ರೇರಣಾ ಶಿಕ್ಷಣ ಟ್ರಸ್ಟ್‌ಗೆ ವಿವಿಧ ಕಂಪನಿಗಳಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ಡೊನೇಷನ್ ರೂಪದಲ್ಲಿ ಸಂದಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಎಡಪಕ್ಷದ ನಾಯಕರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಜತೆಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಹಣ ಸಂದಾಯವಾದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಪ್ರೇರಣ ಶಿಕ್ಷಣ ಟ್ರಸ್ಟ್‌ಗೆ ಅಕ್ರಮವಾಗಿ ಹಣ ಸಂದಾಯ ಮಾಡಲು ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದ ಅವರು, ನಷ್ಟದಲ್ಲಿರುವ ಕಂಪನಿಗಳಿಂದ ಅಷ್ಟೊಂದು ಪ್ರಮಾಣದಲ್ಲಿ ದೇಣಿಗೆ ನೀಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ವಿವಿಧ ಕಂಪನಿಗಳಿಂದ ಒಟ್ಟು 27.18 ಕೋಟಿ ರೂ.ಸಂದಾಯ:
ಆದರ್ಶ ಡೆವಲಪರ್ಸ್‌ನಿಂದ 1.37 ಕೋಟಿ
ಇಂಡಸ್ಟ್ರಿಯಲ್ ಟೆಕ್ನೋಲ್ಯಾಂಡ್ ಟವರ್-3.4 ಕೋಟಿ
ಆದರ್ಶ ಡೆವಲಪರ್ಸ್ ಎಂ.ಡಿ.ಜೈಶಂಕರ್-4.3 ಕೋಟಿ
ರಿಯಲ್ ಟೆಕ್ನಿಕಲ್ ಸಲ್ಯೂಷನ್-3.2 ಕೋಟಿ
ಸೌತ್ ವೆಸ್ಟ್ ಮೈನಿಂಗ್ ಕಂಪನಿ-10 ಕೋಟಿ
ಜೈಭಾರತ್ ಟೆಕ್ನಿಕಲ್-3.4 ಕೋಟಿ
ಪ್ರೊ.ದೊರೆಸ್ವಾಮಿಯಿಂದ-50 ಲಕ್ಷ
ಜವಾಹರ್‌ರಿಂದ-50 ಲಕ್ಷ

ಶಿವಮೊಗ್ಗದಲ್ಲಿ ಕಾರ್ಯಾಚರಿಸುತ್ತಿರುವ ಪ್ರೇರಣಾ ಶಿಕ್ಷಣ ಟ್ರಸ್ಟ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಜಯಶಂಕರ್, ದೊರೆಸ್ವಾಮಿ ಹಾಗೂ ಜವಾಹರ್ ಟ್ರಸ್ಟಿಗಳಾಗಿದ್ದಾರೆ. ಆದರೆ ನಷ್ಟದಲ್ಲಿರುವ ಕಂಪನಿಗಳು ಪ್ರೇರಣಾ ಟ್ರಸ್ಟ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಗಡ್ಕರಿ, ಅಡ್ವಾಣಿ ಈಗ ಏನ್ ಹೇಳ್ತಾರೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂ ಹಗರಣ, ಭ್ರಷ್ಟಾಚಾರದ ಆರೋಪ ಇದ್ದರೂ ಕೂಡ ಬಿಜೆಪಿ ವರಿಷ್ಠರು ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ ಇದೀಗ ಸಿಎಂ ಕುಟುಂಬ ಹಾಗೂ ಸಿಎಂ ಕಚೇರಿಯ ಕುಮ್ಮಕ್ಕಿನಿಂದ ನಡೆದಿರುವ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ದಾಖಲೆ ಸಹಿತ ಬಿಡುಗಡೆ ಮಾಡಿದ್ದೇವೆ ಇದಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಅಡ್ವಾಣಿ, ನಿತಿನ್ ಗಡ್ಕರಿ ಏನ್ ಹೇಳ್ತಾರೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಎಸಗಿದ್ದರು ಮುಖ್ಯಮಂತ್ರಿ ಬಗ್ಗೆ ವರಿಷ್ಠರ ಕೈಗೊಂಡ ಕ್ರಮ ನನಗೆ ಅಚ್ಚರಿ ಹುಟ್ಟಿಸಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಂದು ವಿವಾದದ ಸುಳಿಯಲ್ಲಿ ಸಿಕ್ಕಂತಾಗಿದೆ.

Share this Story:

Follow Webdunia kannada