Select Your Language

Notifications

webdunia
webdunia
webdunia
webdunia

ಸಿಇಸಿ ನೇಮಕ ಸಮಿತಿಯಲ್ಲಿ ವಿಪಕ್ಷಗಳಿಗೆ ಸ್ಥಾನ: ಅಡ್ವಾಣಿ

ಎಲ್ಕೆ ಅಡ್ವಾಣಿ
ನವದೆಹಲಿ , ಭಾನುವಾರ, 6 ಮಾರ್ಚ್ 2011 (15:23 IST)
PTI
ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನನ್ನು ಸೇರ್ಪಡೆಗೊಳಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಸಿವಿಸಿ ಮತ್ತು ಸಿಐಸಿ ಮುಖ್ಯಸ್ಥರ ನೇಮಕ ಮಾಡುವ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಸ್ಥಾನ ನೀಡಲಾಗುತ್ತದೆ. ಅದರಂತೆ, ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ.

1998ರಲ್ಲಿ ಅಪೆಕ್ಸ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ, ನ್ಯಾಯಮೂರ್ತಿ ಎಸ್‌ಪಿ ಬರುಚಾ ಮತ್ತು ಎಸ್‌ಸಿ ಸೇನ್ ನೇತೃತ್ವದ ನ್ಯಾಯಪೀಠ ಸಿವಿಸಿ ಮುಖ್ಯಸ್ಥರ ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ,ಗೃಹ ಸಚಿವ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರಬೇಕು ಎಂದು ಮಹತ್ವದ ತೀರ್ಪು ನೀಡಿತ್ತು.

ನಂತರ, 2005ರ ಮಾಹಿತಿ ಹಕ್ಕು ಕಾಯ್ದೆ ಅನುಸಾರವಾಗಿ ಮುಖ್ಯ ವಾರ್ತಾ ಆಯುಕ್ತರನ್ನು ನೇಮಕ ಮಾಡುವಾಗ ಅಪೆಕ್ಸ್ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿತ್ತು. ಆದರೆ, ಗೃಹ ಸಚಿವರ ಬದಲಾಗಿ ಕಾನೂನು ಸಚಿವರನ್ನು ಸೇರ್ಪಡೆಗೊಳಿಸಲಾಗಿತ್ತು ಎಂದು ಬಿಜೆಪಿ ಪಕ್ಷದ ಹರಿಯ ನಾಯಕ ಎಲ್‌.ಕೆ.ಅಡ್ವಾಣಿ ತಿಳಿಸಿದ್ದಾರೆ.

Share this Story:

Follow Webdunia kannada