ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲು ಯುವಕರಿಗೆ ಹೇರಳ ಅವಕಾಶಗಳಿವೆ ಎಂದು ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಕೇಂದ್ರದ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿ, ಇಂದು ಕೇವಲ 19 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಉಳಿದಂತೆ ಯುವಕರಿಗೆ ಹೆಚ್ಚಿನ ಅವಕಾಶ ನೀಡಬಹುದಾಗಿದ್ದು,ಅನುಭವಿ ಸದಸ್ಯರು ಹಾಗೂ ಯುವ ಸಚಿವರನ್ನು ಸೇರ್ಪಡೆಗೊಳಿಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಖಾತೆ ದೊರೆಯಲಿದೆ ಎನ್ನುವ ಉಹಾಪೋಹ ವರದಿಗಳನ್ನು ತಳ್ಳಿಹಾಕಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಖಾತೆಗಳು ಹಂಚಿಕೆಯಾಗುವವರೆಗೆ ಹೇಳುವುದು ಅವಸರವಾದಿತನವಾಗುತ್ತದೆ. ಖಾತೆ ಹಂಚಿಕೆ ವಿಷಯ ಪ್ರಧಾನಿಯವರಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ನುಡಿದರು.