ನಾಡ ಪಿಸ್ತೂಲ್ ಒಂದನ್ನು ಶಾಲೆಗೆ ತಂದಿರುವ ಆರೋಪದ ಮೇಲೆ 10ನೆ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಇಲ್ಲಿಗೆ ಸಮೀಪದ ಶಾಲೆಯೊಂದರಿಂದ ಬಂಧಿಸಲಾಗಿದೆ.
ಇಲ್ಲಿಂದ 30 ಕಿಲೋಮೀಟರ್ ದೂರದಲ್ಲಿರುವ ಫರೂಕ್‌ನಗರ್ ಎಂಬಲ್ಲಿರುವ ಧಂಕೇರ್ ಹೈಸ್ಕೂಲ್‌ನ ವಿದ್ಯಾರ್ಥಿಯಾಗಿರುವ 17ರ ಹರೆಯದ ದೀಪಕ್ ಎಂಬಾತನನ್ನು ಗುರ್ಗಾಂವ್ ಪೊಲೀಸರು ಬಂಧಿಸಿದ್ದಾರೆ.
ದೀಪಕ್‌ನನ್ನು ವಿಚಾರಣೆಗೊಳಪಡಿಸಿದ ವೇಳೆ, ವಿಜೇಂದರ್ ಎಂಬಾತ ತನಗೆ ಈ ನಾಡ ಪಿಸ್ತೂಲ್ ನೀಡಿರುವುದಾಗಿ ತಿಳಿಸಿದ ಎಂಬುದಾಗಿ ಪೊಲೀಸ್ ಆಯುಕ್ತ ಎಸ್.ಎಸ್. ದೇಸ್ವಾಲ್ ತಿಳಿಸಿದ್ದಾರೆ.
ಇದೀಗ ದೀಪಕ್‌ನನ್ನು ಬಂಧಿಸಲಾಗಿದ್ದು, ವಿಜೇಂದರ್‌ಗಾಗಿ ಎದುರು ನೋಡುತ್ತಿದ್ದಾರೆ.