ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಬಗ್ಗೆ ಬಂದಿರುವ ಪುಸ್ತಕಗಳಿಗೆ ಲೆಕ್ಕವಿಲ್ಲ. ಅವರ ಜೀವನದ ವಿವಿಧ ಮಜಲುಗಳನ್ನು ಈಗಾಗಲೇ ಹಲವು ಮಂದಿ ವಿವರಿಸಿದ್ದಾರೆ. ಅವರ ಲೈಂಗಿಕ ಜೀವನದ ಬಗ್ಗೆಯೂ ಪುಸ್ತಕಗಳು ಪ್ರಕಟವಾಗಿವೆ. ಆದರೆ ಈಗ ಅವೆಲ್ಲವನ್ನೂ ಮೀರಿಸುವ ವಿವಾದಿತ ಪುಸ್ತಕವೊಂದು ಬಿಡುಗಡೆ ಕಂಡಿದೆ. ಅದರ ಪ್ರಕಾರ ಜರ್ಮನ್-ಯೆಹೂದಿ ಬಾಡಿಬಿಲ್ಡರ್-ವಾಸ್ತುಶಿಲ್ಪಿ ಒಬ್ಬನ ಜತೆ ಗಾಂಧೀಜಿಯವರು ಸಂಬಂಧ ಹೊಂದಿದ್ದರು.
Great Soul: Mahatma Gandhi and His Struggle with India ಎಂಬ ಈ ಪುಸ್ತಕ ಬರೆದಿರುವುದು ಪುಲಿಟ್ಜರ್ ಪ್ರಶಸ್ತಿ ವಿಜೇತ ಜೋಸೆಫ್ ಲೆಲಿವೆಲ್ಡ್. ಆಘಾತಕಾರಿ ಎನಿಸುವ ಅಂಶಗಳು ಈ ಪುಸ್ತಕದಲ್ಲಿ ಇವೆ ಎಂದು ಇಂಗ್ಲೆಂಡ್ ಮತ್ತು ಅಮೆರಿಕಾದ ಪತ್ರಿಕೆಗಳಲ್ಲಿ ವಿಮರ್ಶಕರು ಬರೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಜರ್ಮನ್-ಯೆಹೂದಿ ದೇಹದಾರ್ಢ್ಯ ಪಟು ಹರ್ಮಾನ್ ಕಲೆಂಬಚ್ ಅವರು ಗಾಂಧಿಯವರ 'ಪ್ರಿಯಕರ' ಮತ್ತು ಗಾಂಧಿ ಒಬ್ಬ 'ಬೈಸೆಕ್ಸುವಲ್' ಎಂದು ಈ ಪುಸ್ತಕದಲ್ಲಿ ಆರೋಪಿಸಲಾಗಿದೆ.ತೀರಾ ಆಪ್ತ ಸಂಬಂಧ ಹೊಂದಿದ್ದ ಗಾಂಧಿ ಮತ್ತು ಹರ್ಮಾನ್ ನಡುವೆ ದೈಹಿಕ ಸಂಬಂಧ ಇದ್ದಿರಬಹುದಾದ ಸಾಧ್ಯತೆಗಳಿವೆ ಎಂದು ಲೇಖಕ ಜೋಸೆಫ್ ಶಂಕಿಸಿದ್ದಾರೆ.ಇದರಲ್ಲಿ ಗಾಂಧೀಜಿ ಮತ್ತು ಹರ್ಮಾನ್ ನಡುವಿನ ಪತ್ರ ವ್ಯವಹಾರಗಳ ಅಂಶಗಳನ್ನು ಕೂಡ ಉಲ್ಲೇಖಿಸಲಾಗಿದೆ.'
ನನ್ನ ಇಡೀ ದೇಹವನ್ನು ನೀನು ಯಾವ ರೀತಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದೀಯಾ... ಇದು ಸೇಡಿನಿಂದ ಕೂಡಿದ ದಾಸ್ಯ..'ತನ್ನನ್ನು ತಾನು 'ಅಪ್ಪರ್ ಹೌಸ್' (ಮೇಲ್ಮನೆ) ಎಂದು ಕರೆಸಿಕೊಂಡಿದ್ದ ಗಾಂಧಿ, ಹರ್ಮಾನ್ರನ್ನು 'ಲೋವರ್ ಹೌಸ್' (ಕೆಳಮನೆ) ಎಂದು ಕರೆದಿದ್ದರು. ಯಾವುದೇ ಮಹಿಳೆಯರತ್ತ ಕಾಮಾಪೇಕ್ಷೆಯಿಂದ ನೋಡದಂತೆ 'ಲೋವರ್ ಹೌಸ್'ನಿಂದ ವಾಗ್ದಾನ ಪಡೆದುಕೊಂಡಿದ್ದರು ಎಂದೆಲ್ಲ 'ನ್ಯೂಯಾರ್ಕ್ ಟೈಮ್ಸ್' ಮಾಜಿ ಕಾರ್ಯಕಾರಿ ಸಂಪಾದಕ ಜೋಸೆಫ್ ಆರೋಪಿಸಿದ್ದಾರೆ ಎಂದು ವಿಮರ್ಶಕರು ಉಲ್ಲೇಖಿಸಿದ್ದಾರೆ.ಬೈಸೆಕ್ಸುವಲ್ ಎಂದರೆ ದ್ವಿಲಿಂಗೀ ಅಥವಾ ಉಭಯ ಲಿಂಗಿ. ಅಂದರೆ ಪುರುಷ ಮತ್ತು ಸ್ತ್ರೀ -- ಇಬ್ಬರ ಜತೆಗೂ ಲೈಂಗಿಕ ಚಟುವಟಿಕೆ ನಡೆಸುವವರನ್ನು ಬೈಸೆಕ್ಸುವಲ್ ಎಂದು ಕರೆಯಲಾಗುತ್ತದೆ.ಸ್ವಾತಂತ್ರ್ಯವನ್ನು ವಿಳಂಬಿಸಿದ್ದ ಗಾಂಧಿ...ಈಗ ರಾಷ್ಟ್ರಪಿತ ಎಂದು ಕರೆಯಲಾಗುತ್ತಿರುವ ಮಹಾತ್ಮಾ ಗಾಂಧಿ ವಾಸ್ತವದಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ವಿಳಂಬಿಸಿದ್ದರು. ಅವರು ಮುಸ್ಲಿಮರು, ಅದರಲ್ಲೂ ಜಿನ್ನಾರನ್ನು ಮತ್ತು ಸಾಕಷ್ಟು ಹಿಂದೂಗಳನ್ನು ಕೂಡ ಎದುರು ಹಾಕಿಕೊಂಡಿದ್ದರು. ಅವರು ದಕ್ಷಿಣ ಆಫ್ರಿಕಾದ ಕರಿಯರತ್ತ ವರ್ಣಭೇದ ನೀತಿ ಹೊಂದಿದ್ದರು ಎಂದು ಲೇಖಕ ಜೋಸೆಫ್ ಆರೋಪಿಸಿದ್ದಾರೆ.ಹಾಗೆ ನಾನು ಆರೋಪಿಸಿಲ್ಲ: ಲೇಖಕ ಗಾಂಧೀಜಿಯನ್ನು ನಾನು ನನ್ನ ಪುಸ್ತಕದಲ್ಲಿ 'ಜನಾಂಗೀಯವಾದಿ' ಮತ್ತು 'ಬೈಸೆಕ್ಸುವಲ್' ಎಂದು ಹೇಳಿಲ್ಲ. ಅಂತಹ ಆರೋಪವನ್ನು ಅವರ ಮೇಲೆ ನಾನು ಮಾಡಿಲ್ಲ. 'ಬೈಸೆಕ್ಸುವಲ್' ಎಂಬ ಶಬ್ದವೇ ಪುಸ್ತಕದಲ್ಲಿ ಇಲ್ಲ. 'ಜನಾಂಗೀಯವಾದಿ' ಎಂಬ ಶಬ್ಧವನ್ನು ಬಳಕೆ ಮಾಡಿರುವುದು, ಗಾಂಧಿಯವರ ಹೇಳಿಕೆಯನ್ನು ವಿವರಿಸುವ ಸಂದರ್ಭದಲ್ಲಿ ಎಂದು ಪತ್ರಿಕೆಯೊಂದಕ್ಕೆ ಲೇಖಕ ಜೋಸೆಫ್ ಸ್ಪಷ್ಟಪಡಿಸಿದ್ದಾರೆ.ಆದರೆ ಇನ್ನೊಂದು ಪತ್ರಿಕೆ ಸಂಪರ್ಕಿಸಿದ ಸಂದರ್ಭದಲ್ಲಿ ಜೋಸೆಫ್ ಬೇರೆಯದೇ ಉತ್ತರ ನೀಡಿದ್ದಾರೆ.ಗಾಂಧಿ ಮತ್ತು ಹರ್ಮಾನ್ ನಡುವಿನ ಪತ್ರ ವ್ಯವಹಾರದ ದಾಖಲೆಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಗಾಂಧಿಯವರೇ ಸ್ಥಾಪಿಸಿದ್ದ ನವಜೀವನ ಟ್ರಸ್ಟ್ ಪ್ರಕಟಿಸಿದ್ದ ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ. ಗಾಂಧಿಯವರು ಹರ್ಮಾನ್ ಅವರಿಗೆ ಪತ್ರ ಬರೆದಿದ್ದರೇ ಹೊರತು, ಹರ್ಮಾನ್ ಅವರಿಂದ ಗಾಂಧೀಜಿಗೆ ಪತ್ರ ಬಂದಿರಲಿಲ್ಲ ಎಂದು ಲೇಖಕರು ಪ್ರತಿಕ್ರಿಯಿಸಿದ್ದಾರೆ.ಗಾಂಧೀಜಿಯವರ ವಿಚಾರ ತೀರಾ ಸೂಕ್ಷ್ಮವಾದದ್ದು ತನಗೆ ತಿಳಿದಿದೆ. ಹಾಗಾಗಿ ಅಗಾಧ ಗೌರವದೊಂದಿಗೆ ನಾನು ಪುಸ್ತಕ ಬರೆದಿದ್ದೇನೆ. ವಿಷಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿದ್ದೇನೆ ಎಂದು 74ರ ಹರೆಯದ ಜೋಸೆಫ್ ಹೇಳಿದ್ದಾರೆ.ಗಾಂಧಿವಾದಿಗಳಿಂದ ಆಕ್ರೋಶ...ಹೀಗೆಂದು ಹಲವು ಇತಿಹಾಸ ತಜ್ಞರು, ಗಾಂಧಿವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಗಾಂಧೀಜಿ ಮತ್ತು ಹರ್ಮಾನ್ ನಡುವಿನ ಪತ್ರ ವ್ಯವಹಾರದ ಪುಸ್ತಕದಲ್ಲಿ ಪ್ರಸಕ್ತ ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆಯಲ್ಲಿ ಉಲ್ಲೇಖಿಸಿರುವ ಅಂಶಗಳಿಲ್ಲ. ಅಲ್ಲಿದ್ದ ಅಂಶಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ವಿಮರ್ಶಕರು ಚರ್ಚಿಲ್ ಅಭಿಮಾನಿಗಳು ಮತ್ತು ಬಲಪಂಥೀಯರು ಎಂದು ಕಿಡಿ ಕಾರಿದ್ದಾರೆ.ಈ ಹಿಂದೆ ಗಾಂಧೀಜಿಯವರ ಲೈಂಗಿಕ ಜೀವನದ ಬಗ್ಗೆ ಎರಡು ಪುಸ್ತಕಗಳನ್ನು ಬರೆದಿದ್ದ ಸುಧೀರ್ ಕಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜೋಸೆಫ್ ಬರೆದಿರುವ ಪುಸ್ತಕವನ್ನು ನಾನು ಇನ್ನಷ್ಟೇ ಓದಬೇಕಾಗಿದೆ. ಆದರೆ ಗಾಂಧೀಜಿಯವರ ಇತಿಹಾಸವನ್ನು ನೋಡಿದರೆ, ವಿಮರ್ಶಕರು ಜೋಸೆಫ್ ಅವರ ಪುಸ್ತಕದಲ್ಲಿದೆ ಎಂದು ಹೇಳಿರುವಂತಹ ಯಾವುದೇ ಅಂಶಗಳು ನನ್ನ ಗಮನಕ್ಕೆ ಬಂದಿಲ್ಲ. ಪತ್ರಗಳಲ್ಲಿ ಕೆಲವೊಂದು ಉಲ್ಲೇಖಗಳು ಇರುವುದು ಹೌದು. ಆದರೆ ಅದನ್ನು ವಿಮರ್ಶಕರು ಬೇರೆಯದೇ ಆದ ರೀತಿಯಲ್ಲಿ ಅರ್ಥೈಸಿಕೊಂಡಿರಬಹುದು ಎಂದಿದ್ದಾರೆ.ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ವಿರುದ್ಧ ಬಂದಿರುವ ಆರೋಪಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಲೇಖಕರು ಗಾಂಧಿಯನ್ನು ಅಪಮಾನಿಸಲೆಂದೇ ಇಂತಹ ಉಲ್ಲೇಖಗಳನ್ನು, ಆರೋಪಗಳನ್ನು ಮಾಡಿದ್ದಾರೆ ಎಂದು ಗಾಂಧಿವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.