ಡಿಎಂಕೆ ಸಂಸದರಿಂದ ನಾಳೆ ರಾಜೀನಾಮೆ ಸಲ್ಲಿಕೆ: ಕರುಣಾ
ಚೆನ್ನೈ , ಭಾನುವಾರ, 6 ಮಾರ್ಚ್ 2011 (15:06 IST)
ಯುಪಿಎ ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿರುವ ಡಿಎಂಕೆ, ಸೋಮವಾರದಂದು ಕೇಂದ್ರದಲ್ಲಿರುವ ಡಿಎಂಕೆ ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಕೇಂದ್ರಡ ಡಿಎಂಕೆ ಸಚಿವರು ನಾಳೆ ದೆಹಲಿಗೆ ತೆರಳುತ್ತಿದ್ದು ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ಪಕ್ಷದ ಕೇಂದ್ರ ಕಚೇರಿ ಅನ್ನಾ ಅರಿವಾಲಯಂನಲ್ಲಿ ಹಿರಿಯ ನಾಯಕ ಟಿ ಆರ್ ಬಾಲು ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಂ.ಕೆ.ಅಳಗಿರಿ ಮತ್ತು ದಯಾನಿಧಿ ಮಾರನ್ ಸೇರಿದಂತೆ ಕೇಂದ್ರ ಸಂಪುಟದಲ್ಲಿ ಆರು ಮಂದಿ ಸಚಿವರುಗಳಿದ್ದಾರೆ. ಡಿಎಂಕೆ ಪಕ್ಷ ಮೈತ್ರಿಕೂಟದಿಂದ ಹೊರಬರುವ ನಿರ್ಧಾರ ಘೋಷಿಸಿದ ನಂತರ ಕಾಂಗ್ರೆಸ್ ನಾಯಕರು ಇಲ್ಲಿಯವರೆಗೆ ಭೇಟಿ ಮಾಡಿ ಚರ್ಚಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ 13 ರಂದು ನಡೆಯಲಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 63 ವಿಧಾನ ಸಭಾ ಕ್ಷೇತ್ರಗಳ ಬೇಡಿಕೆಯನ್ನು ಮುಂದಿಟ್ಟಿದ್ದರಿಂದ, ಡಿಎಂಕೆ ಪಕ್ಷ 63 ಕ್ಷೇತ್ರಗಳನ್ನು ನೀಡಲು ನಿರಾಕರಿಸಿ ಮೈತ್ರಿಕೂಟದಿಂದ ಹೊರಬರುವ ಬೆದರಿಕೆ ಒಡ್ಡಿದೆ.ಆದರೆ, ಕೇಂದ್ರ ಸರಕಾರಕ್ಕೆ ವಿಷಯ ಆಧಾರಿತ ಬೆಂಬಲ ನೀಡುವುದಾಗಿ ಡಿಎಂಕೆ ನಾಯಕರು ಹೇಳಿಕೆ ನೀಡಿದ್ದಾರೆ.