ಜೋಶಿ ಹತ್ಯೆಗೈದಿದ್ದು ಸಾಧ್ವಿ ಪ್ರಜ್ಞಾ ಸಿಂಗ್: ಜಾರ್ಜ್‌ಶೀಟ್ ಸಲ್ಲಿಕೆ
ದೇವಾಸ್ , ಬುಧವಾರ, 2 ಮಾರ್ಚ್ 2011 (10:44 IST)
ಆರ್ಎಸ್ಎಸ್ ಕಾರ್ಯಕರ್ತ ಸುನೀಲ್ ಜೋಶಿ ಅವರನ್ನು ಮಾಲೇಗಾಂವ್ ಸ್ಫೋಟ ರೂವಾರಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಹಿಂದೂ ತೀವ್ರವಾದಿಗಳೇ ಹತ್ಯೆಗೈದಿದ್ದಾರೆ ಎಂದು ದೇವಾಸ್ ಪೊಲೀಸರು ನ್ಯಾಯಾಲಯಕ್ಕೆ ಜಾರ್ಜ್‌ಶೀಟ್ ಸಲ್ಲಿಸಿದ್ದಾರೆ.2007
ರಲ್ಲಿ ಸುನೀಲ್ ಜೋಶಿ ಅವರನ್ನು ಹತ್ಯೆಗೈಯಲಾಗಿತ್ತು. ಜೋಶಿ ಪಕ್ಷದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಲ್ಲದೇ ಸಾಧ್ವಿ ಪ್ರಜ್ಞಾ ಸಿಂಗ್ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೀಗಾಗಿ ಪ್ರಜ್ಞಾ ಸಿಂಗ್ ಕುಮ್ಮಕ್ಕಿನಿಂದ ಹಿಂದು ತೀವ್ರವಾದಿಗಳಾದ ಆನಂದ್ ರಾಜ್ ಕಟಾರಿಯಾ, ಹರ್ಷದ್ ಸೋಲಂಕಿ, ವಾಸುದೇವ್ ಪರಮಾರ್ ಮತ್ತು ರಾಮಚಂದ್ರ ಪಟೇಲ್ ಅವರು ಕೊಲೆ ಮಾಡಿದ್ದಾರೆ ಎಂದು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಪದ್ಮೇಶ್ ಶಾ ಅವರಿಗೆ ಸಲ್ಲಿಸಿರುವ 432 ಪುಟಗಳ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಆರ್ಎಸ್ಎಸ್ ಪ್ರಚಾರಕ್ ಆಗಿದ್ದ ಜೋಶಿ ಹತ್ಯೆ ಕುರಿತಂತೆ ದೇವಾಸ್ ಪೊಲೀಸರು ಪ್ರಜ್ಞಾಸಿಂಗ್ ಅವರನ್ನು 2007ರಲ್ಲಿ ಬಂಧಿಸಿದ್ದರು. ನಂತರ ಬಿಡುಗಡೆಗೊಂಡಿದ್ದರು. ಭಾನುವಾರ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 124 ಸಾಕ್ಷಿಗಳಿಂದ ಹೇಳಿಕೆ ಪಡೆಯಲಾಗಿದೆ ಎಂದು ವಿವರಿಸಿದೆ. ಅಲ್ಲದೇ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿಯೂ ಸಾಧ್ವಿಯನ್ನು 2008ರಲ್ಲಿ ಮತ್ತೆ ಬಂಧಿಸಲಾಗಿತ್ತು.ಆದರೆ ಜೋಶಿ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳಾದ ಗುಜರಾತ್ ಮೂಲದ ಮೆಹುಲ್ ಮತ್ತು ರಾಕೆಶ್ ತಲೆತಪ್ಪಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.