ಗೋದ್ರಾ ಹತ್ಯಾಕಾಂಡ: 11 ಮಂದಿಗೆ ಗಲ್ಲು, 20 ಜನರಿಗೆ ಜೀವಾವಧಿ
ಅಹಮದಾಬಾದ್ , ಮಂಗಳವಾರ, 1 ಮಾರ್ಚ್ 2011 (12:20 IST)
59
ಹಿಂದೂ ಕರಸೇವಕರು ಬಲಿಯಾದ ಗೋದ್ರಾ ಹತ್ಯಾಕಾಂಡದ 31 ಆರೋಪಿಗಳಲ್ಲಿ 11 ಮಂದಿಗೆ ಮರಣದಂಡನೆ, 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಅಹಮದಾಬಾದ್ ವಿಶೇಷ ನ್ಯಾಯಾಲಯ ಮಂಗಳವಾರ ಪ್ರಕಟಿಸಿದೆ.ಸಾಬರ್‌ಮತಿ ಸೆಂಟ್ರಲ್ ಜೈಲನ್ ಒಳಗಡೆ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶ ಪಿ.ಆರ್.ಪಟೇಲ್ ಅವರನ್ನೊಳಗೊಂಡ ಪೀಠ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.ವಿಶೇಷ ನ್ಯಾಯಾಲಯ ಕಳೆದ ವಾರವಷ್ಟೇ ಪ್ರಕರಣದ 94 ಆರೋಪಿಗಳಲ್ಲಿ 31 ಮಂದಿ ತಪ್ಪಿತಸ್ಥರು ಎಂದು ಪ್ರಕಟಿಸಿ, 63 ಮಂದಿಯನ್ನು ಖುಲಾಸೆಗೊಳಿಸಿ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಫೆಬ್ರುವರಿ 25ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಫೆಬ್ರುವರಿ 25ರಂದು ಶಿಕ್ಷೆಯನ್ನು ಮಾರ್ಚ್ 1ಕ್ಕೆ ನೀಡುವುದಾಗಿ ಹೇಳಿತ್ತು. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಿದ್ದ ಮೌಲ್ವಿ ಉಮರ್‌ಜೀಯನ್ನೂ ಕೂಡ ಕೋರ್ಟ್ ದೋಷಮುಕ್ತಗೊಳಿಸಿತ್ತು.ಗುಜರಾತ್ ಕೋಮುಗಲಭೆಗೆ ಮೂಲ ಕಾರಣವಾದ ಗೋದ್ರಾ ಹಿಂದೂಗಳ ಹತ್ಯಾಕಾಂಡವು ವ್ಯವಸ್ಥಿತ ಪಿತೂರಿಯೇ ವಿನಃ ಆಕಸ್ಮಿಕ ಘಟನೆ ಅಲ್ಲ ಎಂದು ನ್ಯಾಯಮೂರ್ತಿ ಪಿ.ಆರ್.ಪಟೇಲ್ ತೀರ್ಪು ನೀಡಿದ್ದರು.ಅಯೋಧ್ಯೆಗೆ ತೆರಳಿದ್ದ ಹಿಂದೂ ಕರಸೇವಕರು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಿಹಾರದ ದರ್ಬಾಂಗಾದಿಂದ ಗುಜರಾತಿನ ಅಹಮದಾಬಾದ್‌ಗೆ ಬರುತ್ತಿದ್ದಾಗ, ಗೋದ್ರಾ ರೈಲು ನಿಲ್ದಾಣದಲ್ಲಿ 27-02-2002ರಂದು ಬೆಳಿಗ್ಗೆ ಎಸ್6 ಬೋಗಿಗೆ ಹೊರಗಿನಿಂದ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು. ಮರಣದಂಡನೆಗೆ ಒಳಗಾದ 11 ಮಂದಿ:1.
ಅಬ್ದುಲ್ ರಜಾಕ್ ಮೊಹಮ್ಮದ್ ಕುರ್ಕರ್ (44 ವರ್ಷ) 2.
ರಂಜಾನಿ ಬಿನ್ಯಾಮಿನ್ ಬೆಹ್ರಾ (28) 3.
ಹಸನ್ ಅಹ್ಮದ್ ಚರ್ಕಾ ಆಲಿಯಾಸ್ ಲಾಲೂ (23) 4.
ಜಬೀರ್ ಬಿನ್ಯಾಮಿನ್ ಬೆಹ್ರಾ (20) 5.
ಮೆಹಬೂಬ್ ಖಾಲಿದ್ ಚಂದಾ (31) 6.
ಸಲೀಂ ಆಲಿಯಾಸ್ ಸಲ್ಮಾನ್ ಯೂಸುಫ್ ಸತ್ತಾರ್ ಜರ್ದಾ (27) 7.
ಸಿರಾಜ್ ಮೊಹಮ್ಮದ್ ಅಬ್ದುಲ್ ಮೆದಾ ಆಲಿಯಾಸ್ ಬಾಲಾ (27) 8.
ಇರ್ಫಾನ್ ಸಿರಾಜ್ ಪಾಡೊ ಗಂಚಿ (19) 9.
ಇರ್ಫಾನ್ ಮೊಹಮ್ಮದ್ ಹನೀಫ್ ಅಬ್ದುಲ್ ಗನಿ ಪತಾಲಿಯಾ (22) 10.
ಮೆಹಬೂಬ್ ಅಹ್ಮದ್ ಯೂಸುಫ್ ಹಸನ್ ಆಲಿಯಾಸ್ ಲಾತಿಕೊ (27) 11.
ಬಿಲಾಲ್ ಇಸ್ಮಾಯಿಲ್ ಅಬ್ದುಲ್ ಮಜೀದ್ ಸುಜೇಲಾ ಆಲಿಯಾಸ್ ಬಿಲಾಲ್ ಹಾಜಿ (41) ಜೀವಾವಧಿ ಶಿಕ್ಷೆಗೊಳಗಾದ 20 ಮಂದಿ : 1.
ಸುಲೇಮಾನ್ ಅಹ್ಮದ್ ಹುಸೇನ್ ಆಲಿಯಾ ಟೈಗರ್ (34) 2.
ಅಬ್ದುಲ್ ರೆಹಮಾನ್ ಅಬ್ದುಲ್ ಮಜೀದ್ ದಂತಿಯಾ ಆಲಿಯಾಸ್ ಕಂಕಟ್ಟೋ (48) 3.
ಖಾಸಿಂ ಅಬ್ದುಲ್ ಸತ್ತಾರ್ ಆಲಿಯಾಸ್ ಖಾಸಿಂ ಬಿರಿಯಾನಿ ಗಂಚಿ (22) 4.
ಅನ್ವರ್ ಮೊಹಮ್ಮದ್ ಮೆಹ್ದಾ ಆಲಿಯಾಸ್ ಲಾಲ್ ಶೇಖ್ (22) 5.
ಸಿದ್ಧಿಕ್ ಆಲಿಯಾಸ್ ಮಾತುಂಗಾ ಅಬ್ದುಲ್ಲಾಹ್ ಬದಮ್ (46) 6.
ಮೆಹಬೂಬ್ ಯಾಕೂಬ್ ಮಿತಾ ಆಲಿಯಾಸ್ ಪೊಪಾ (30) 7.
ಸೊಹೆಬ್ ಯೂಸುಫ್ ಅಹ್ಮದ್ ಕಲಂದರ್ (22) 8.
ಶೌಕತ್ ಆಲಿಯಾಸ್ ಬಾನೊ ಫಾರೂಕ್ ಅಬ್ದುಲ್ ಸತ್ತಾರ್ ಪತಾಲಿಯಾ (23) 9.
ಅಬ್ದುಲ್ ಸತ್ತಾರ್ ಇಬ್ರಾಹಿಂ ಗಡ್ಡಿ ಅಸ್ಲಾ (39) 10.
ಅಬ್ದುಲ್ ರವೂಫ್ ಅಬ್ದುಲ್ ಮಜೀದ್ ಇಸಾ (48) 11.
ಯೂನಸ್ ಅಬ್ದುಲ್ ಹಕ್ ಆಲಿಯಾಸ್ ಗಡಿಯಾಲಿ (24) 12.
ಇಬ್ರಾಹಿಂ ಅಬ್ದುಲ್ ರಜಾಕ್ ಅಬ್ದುಲ್ ಸತ್ತಾರ್ ಸಮೂಲ್ ಆಲಿಯಾಸ್ ಬಾನೊ (20) 13.
ಬಿಲಾಲ್ ಅಬ್ದುಲ್ಲಾಹ್ ಇಸ್ಮಾಯಿಲ್ ಬದಂ ಗಂಚಿ (34) 14.
ಹಾಜಿ ಭೂರಿಯಾ ಅಬ್ದುಲ್ ಸತ್ತಾರ್ ಇಬ್ರಾಹಿಂ ಮುಸಲ್ಮಾನ್ (36) 15.
ಇರ್ಫಾನ್ ಅಬ್ದುಲ್ ಮಜೀದ್ ಗಂಚಿ ಕಲಂದರ್ ಆಲಿಯಾಸ್ ಇರ್ಫಾನ್ ಬೊಪೊ (25) 16.
ಆಯುಧ್ ಅಬ್ದುಲ್ ಗನಿ ಇಸ್ಮಾಯಿಲ್ ಪತಾಲಿಯಾ (37) 17.
ಶೌಕತ್ ಅಬ್ದುಲ್ಲಾ ಮೌಲವಿ ಇಸ್ಮಾಯಿಲ್ ಬದಂ (40) 18.
ಮೊಹಮ್ಮದ್ ಹನೀಫ್ ಆಲಿಯಾಸ್ ಹನಿ ಅಬ್ದುಲ್ಲಾ ಬದಂ (42) 19.
ಶೌಕತ್ ಯೂಸುಫ್ ಇಸ್ಮಾಯಿಲ್ ಮೋಹನ್ ಆಲಿಯಾಸ್ ಬಿಬಿನೊ (28) 20.
ಸಿದ್ಧಿಕ್ ಮೊಹಮ್ಮದ್ ಮೋರಾ (35)