ಏಷ್ಯಾದ ಅತೀ ದೊಡ್ಡ ಮೆಣಸಿನ ಮಾರುಕಟ್ಟೆಯಾಗಿರುವ, ಆಂಧ್ರ ಪ್ರದೇಶದ ಗುಂಟೂರು ಮೆಣಸು ಮಾರುಕಟ್ಟೆಯಲ್ಲಿ ಬೆಂಕಿ ಅವಘಢ ಉಂಟಾಗಿ 95 ಶೇ. ಮಾರುಕಟ್ಟೆ ನಾಶವಾಗಿದೆ.
ಮೆಣಸು ಮಾರುಕಟ್ಟೆ 50 ಎಕರೆ ಪ್ರದೇಶವನ್ನು ಆವರಿಸಿದೆ. ಬೆಂಕಿ ಅಪಘಾತದ ಸಮಯದಲ್ಲಿ ಈ ಮಾರುಕಟ್ಟೆಯಲ್ಲಿ ಎರಡು ಲಕ್ಷ ಕಿಲೋ ಗ್ರಾಂ ಮೆಣಸು ದಾಸ್ತಾನಿತ್ತು.
ಬೆಂಕಿಗೆ ಕಾರಣ ಇನ್ನು ತಿಳಿದು ಬಂದಿಲ್ಲವಾದರೂ, ಸೇದಿ ಎಸೆದ ಸಿಗೆರೆಟ್‌ನ ತುಂಡು ಬೆಂಕಿ ಹಿಡಿಯಲು ಕಾರಣ ಎಂದು ತೀರ್ಮಾನಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತವಿದ್ದು, ಶಾರ್ಟ್ ಸಕ್ಯುಟ್ ಕಾರಣಗಳನ್ನು ನಿರಾಕರಿಸಲಾಗಿದೆ.
ಮಾರುಕಟ್ಟೆ ಮುಚ್ಚುವ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಯಾವುದೇ ಜೀವಹಾನಿ ಸಂಭವಿಸಲಿಲ್ಲ.
ಮಾರುಕಟ್ಟೆಗೆ ಬೆಂಕಿ ಬಿದ್ದಿರುವುದ ಮೆಣಸು ಬೆಳೆಗಾರರಿಗೆ ಕೆಟ್ಟ ಸುದ್ದಿಯಾಗಿದ್ದು, ಇನ್ನೇನು ಮೆಣಸು ಕೊಯ್ಲಿಗೆ ಬಂದಿದ್ದು, ಮಾರುಕಟ್ಟೆಯ ಅವಶ್ಯಕತೆ ಇದೆ.