ಬಿಹಾರ್‌ನಲ್ಲಿರುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಕಡ್ಡಾಯವಾಗಿ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಇಲ್ಲವಾದಲ್ಲಿ ವೇತನ ತಡೆಹಿಡಿಯಲಾಗುತ್ತದೆ ಎಂದು ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳ ಫೆಬ್ರವರಿ 28 ರ ವರೆಗೆ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಸರಕಾರ ಆದೇಶ ನೀಡಿತ್ತು. ಆಸ್ತಿ ವಿವರ ಸಲ್ಲಿಸಿದ ್ದಿಕಾರಿಗಳು ಮುಂದಿನ ಎರಡು ದಿನಗಳಲ್ಲಿ ವೇತನ ಪಡೆಯಲಿದ್ದಾರೆ.ಆಸ್ತಿ ವಿವರ ಸಲ್ಲಿಸದ ಅಧಿಕಾರಗಳ ವೇತನ ತಡೆಹಿಡಿಯಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ 4.75 ಲಕ್ಷ ಸರಕಾರಿ ಅದಿಕಾರಿಗಳಿದ್ದು,ಸರಕಾರಿ ಅಧಿಕಾರಿಗಳಿಗೆ ಸೂಚನೆಯನ್ನು ರವಾನಿಸಲಾಗಿದೆ. ಆಸ್ತಿ ವಿವರ ಸಲ್ಲಿಸಿದ ತಕ್ಷಣ ಅವರ ಖಾತೆಗೆ ವೇತನವನ್ನು ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.