Select Your Language

Notifications

webdunia
webdunia
webdunia
webdunia

2023ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ : ಶಕ್ತಿಕಾಂತ ದಾಸ್

2023ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗಲಿದೆ : ಶಕ್ತಿಕಾಂತ ದಾಸ್
ನವದೆಹಲಿ , ಗುರುವಾರ, 25 ಮೇ 2023 (09:59 IST)
ನವದೆಹಲಿ : 2023ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ.7ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
 
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕಳೆದ ಹಣಕಾಸು ವರ್ಷದ 3 ಮತ್ತು 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ 2022-23ರ ಬೆಳವಣಿಗೆಯು 7 ಶೇಕಡಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ಅಚ್ಚರಿ ಪಡಬೇಕಾದುದ್ದಿಲ್ಲ. 2022-23 ರ ತಾತ್ಕಾಲಿಕ ವಾರ್ಷಿಕ ಅಂದಾಜುಗಳನ್ನು ಪ್ರಸಕ್ತ ವರ್ಷದ ಮೇ 31ರಂದು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

ವಾಸ್ತವವಾಗಿ ಆರ್ಬಿಐ ಮೇಲ್ವಿಚಾರಣೆ ಮಾಡಿದಾಗ ಎಲ್ಲಾ ಹೆಚ್ಚಿನ ಆವರ್ತನ ಸೂಚಕಗಳಲ್ಲಿ, 4ನೇ ತ್ರೈಮಾಸಿಕದಲ್ಲಿ ಆರ್ಥಿಕ ವೇಗ ಕಾಯ್ದುಕೊಂಡಿರುವುದು ಗಮನಕ್ಕೆ ಬಂದಿದೆ. ಪ್ರಸಕ್ತ ವರ್ಷದಲ್ಲೇ ಆರ್ಬಿಐ ಶೇ.6.5ರಷ್ಟು ಪ್ರಗತಿ ದರ ನಿರೀಕ್ಷಿಸಿದೆ ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಥ್ ನಾರಾಯಣ್ ವಿರುದ್ಧ FIR: ಅಶ್ವಥ್ ನಾರಾಯಣ್ ಹೇಳಿದ್ದೇನು?