Select Your Language

Notifications

webdunia
webdunia
webdunia
webdunia

ಅಣುಶಕ್ತಿ ಆಯೋಗಕ್ಕೆ ಅನಿಲ್ ಕಾಕೋಡ್ಕರ್ ವಿದಾಯ

ಅಣುಶಕ್ತಿ ಆಯೋಗಕ್ಕೆ ಅನಿಲ್ ಕಾಕೋಡ್ಕರ್ ವಿದಾಯ
ಮುಂಬೈ , ಮಂಗಳವಾರ, 1 ಡಿಸೆಂಬರ್ 2009 (09:16 IST)
ಅಣುಶಕ್ತಿ ಆಯೋಗದ ಅಧ್ಯಕ್ಷ ಗಾದಿಯಿಂದ ಹಿರಿಯ ಪರಮಾಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಅವರು ಸೋಮವಾರ ಕೆಳಗಿಳಿದಿದ್ದಾರೆ. ಸತತ ಒಂಬತ್ತು ವರ್ಷಗಳ ಕಾಲ ಅವರು ಆಯೋಗದ ಅಧ್ಯಕ್ಷತೆ ವಹಿಸಿದ್ದರು.

ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಕೋಡ್ಕರ್ ಅವರು, ಅಣು ಇಂಧನ ಇಲಾಖೆಯಲ್ಲಿ ಸುಮಾರು 45 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅಣು ಇಂಧನ ಇಲಾಖೆಯ ಕಾರ್ಯದರ್ಶಿಯಾಗಿಯೂ ಅವರು ಹೆಚ್ಚುವರಿ ಸೇವೆ ಸಲ್ಲಿಸಿದ್ದರು.

ಅಣು ಇಂಧನ ಕಾಯಿದೆಯಲ್ಲಿ ಸುಧಾರಣೆ ತರಲು ಯತ್ನಿಸಿದ ಮೊದಲ ಅಧ್ಯಕ್ಷರು ಎನ್ನುವ ಹಿರಿಮೆಗೂ ಪಾತ್ರರಾದ ಕಾಕೋಡ್ಕರ್ ಅವರು, ಭಾರತೀಯ ಖಾಸಗಿ ವ್ಯಕ್ತಿಗಳು ಅಣು ವಿದ್ಯುತ್ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಅನುವು ಮಾಡಿಕೊಟ್ಟಿದ್ದರು.

ಸ್ವಾತಂತ್ರ್ಯ ಯೋಧರ ಮಗನಾದ 66 ವರ್ಷದ ಅಣು ವಿಜ್ಞಾನಿ ಸ್ವಾವಲಂಬನೆಯಲ್ಲಿ ನಂಬಿಕೆ ಇಟ್ಟವರು. 2005ರಲ್ಲಿ ಅಮೆರಿಕ ಅಸಹಕಾರ ತೋರಿದಾಗಲೂ ಸ್ವಶಕ್ತಿಯಿಂದ ಸಮಸ್ಯೆಯನ್ನು ಎದುರಿಸಿದ್ದರು.

Share this Story:

Follow Webdunia kannada