ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ವಿವಾಹದ ಆಮಂತ್ರಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಬದಲಿಗೆ ನರೇಂದರ್ ಎಂದು ಅಕಸ್ಮಿಕ ತಪ್ಪಿನಿಂದಾಗಿ ಮುದ್ರಣವಾಗಿರುವ ಸುದ್ದಿ ವೈರಲ್ ಆಗಿದೆ.
ಬಾಲಿವುಡ್ ನಟಿ ಹಜೆಲ್ ಕೀಚ್ ಅವರೊಂದಿಗೆ ನವೆಂಬರ್ 30 ರಂದು ವಿವಾಹವಾಗುತ್ತಿರುವ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ತಮ್ಮ ವಿವಾಹದ ಆಮಂತ್ರಣ ಪತ್ರವನ್ನು ನೀಡಿದ್ದಾರೆ.
ಕ್ರಿಕೆಟಿಗ ಯುವರಾಜ್ ಸಿಂಗ್ ವಿವಾಹ ಹೈ-ಪ್ರೋಫೈಲ್ ವಿವಾಹ ಕಾರ್ಯಕ್ರಮವಾಗಿದ್ದರಿಂದ, ವಿವಾಹ ಆಮಂತ್ರಣದಲ್ಲಿನ ತಪ್ಪು ಸಾಮಾಜಿಕ ಅಂತರ್ಜಾಲ ತಾಣಗಳಿಗೆ ಗ್ರಾಸವಾಗಿ ಪರಿಣಮಿಸಿದೆ.
ಚಂಡೀಗಢ್‌ನ ಗುರುದ್ವಾರದಲ್ಲಿ ಯುವರಾಜ್ ಸಿಂಗ್ ಮತ್ತು ಹಜೆಲ್ ವಿವಾಹ ನವೆಂಬರ್ 30 ರಂದು ನಡೆಯಲಿದ್ದು, ನಂತರ ಡಿಸೆಂಬರ್2 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಮತ್ತೊಂದು ವಿವಾಹ ಕಾರ್ಯಕ್ರಮ ನಡೆಯಲಿದೆ.
ದೆಹಲಿಯಲ್ಲಿ ಡಿಸೆಂಬರ್ 5 ಮತ್ತು ಡಿಸೆಂಬರ್ 7 ರಂದು ಸಂಗೀತ ಮತ್ತು ರಿಸೆಪ್ಶನ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕೆಲ ವರದಿಗಳಱ ಪ್ರಕಾರ,ಫರ್ಹಾ ಖಾನ್ ಸಂಗೀತಕ್ಕೆ ಯುವರಾಜ್ ಸಿಂಗ್ ಮತ್ತು ಹಜೆಲ್ ಕೀಚ್ ನೃತ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಫರ್ಹಾ ಖಾನ್ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿಯ ವಿವಾಹಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಸಂಗೀತ ಸಮಾರಂಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.