ಹೈದರಾಬಾದ್: 16 ವರ್ಷದ ಅಪ್ರಾಪ್ತ ಯುವತಿಗೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದಲ್ಲದೆ, ಆಕೆಯ ತಂದೆಯ ಬೈಕ್ ಗೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು 24 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಮಗಳು ಇತ್ತೀಚೆಗೆ ಮಂಕಾಗಿರುವುದನ್ನು ಗಮನಿಸಿದ ತಾಯಿ ಈ ಬಗ್ಗೆ ವಿಚಾರಿಸಿದಾಗ ಯುವಕ ಕಳೆದ ಐದು ತಿಂಗಳಿನಿಂದ ತನಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಎಂದು ಹೇಳಿದ್ದಾಳೆ. ಒಂದು ವೇಳೆ ಪ್ರೀತಿಸದೇ ಹೋದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಈ ಸಂಬಂಧ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.