Select Your Language

Notifications

webdunia
webdunia
webdunia
webdunia

ನಕಲಿ 2000 ರೂ ನೋಟು ಹೊಂದಿದ್ದ ಆರೋಪಿಯ ಬಂಧನ

ನಕಲಿ 2000 ರೂ ನೋಟು ಹೊಂದಿದ್ದ ಆರೋಪಿಯ ಬಂಧನ
ಭುವನೇಶ್ವರ್ , ಮಂಗಳವಾರ, 22 ನವೆಂಬರ್ 2016 (14:48 IST)
ಕಾಲ ಕೆಟ್ಟು ಹೋಯಿತು ನೋಡಿ. ಹೊಸ ನೋಟುಗಳು ಬಿಡುಗಡೆಯಾಗಿ ಎಲ್ಲರ ಕೈಗೆ ದೊರೆಯುವ ಮುನ್ನವೇ ನಕಲಿ 2000 ರೂಪಾಯಿ ನೋಟುಗಳು ಚಲಾವಣೆಗೆ ಬಂದಿರುವುದು ಆಘಾತ ಮೂಡಿಸಿದೆ.
 
ಓರಿಸ್ಸಾದ ಸುನಾರಿಮುಂಡಾ ನಗರದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಝಾರ್ಸಗುಡಾ ಪಟ್ಟಣದ ವಾಸಿಯಾದ ಆರೋಪಿ ಮಧುಸೂಧನ್ ಮೆಹರ್ ನಕಲಿ 2000 ರೂ.ನೋಟು ನೀಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. 
 
ಆರೋಪಿ ಮಧುಸೂಧನ ವರ್ತನೆಯ ಬಗ್ಗೆ ಅನುಮಾನಗೊಂಡ ಪೆಟ್ರೋಲ್ ಪಂಪ್ ಸಿಬ್ಬಂದಿ ಮಾಲೀಕರಿಗೆ ತಿಳಿಸಿದಾಗ, ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
 
ಆರೋಪಿ ಮೆಹರ್ ಸ್ಟೀಲ್ ಕಂಪೆನಿಯಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದಾನೆ. ಆತನಿಂದ 42 ಸಾವಿರ ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ನನ್ನನ್ನು ಜೈಲಿಗೆ ಕಳುಹಿಸಬಹುದು, ಮಣಿಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ