ಇದೇನಿದು ವಿಚಿತ್ರ ! ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದ್ವೆ ಮಾಡೋದಾ!?

Webdunia
ಶನಿವಾರ, 25 ಜೂನ್ 2022 (09:26 IST)
ಪಿತೋರ್ಘಡ್ : 12 ವರ್ಷದ ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಾಖಂಡ್ನ  ಪಿತೋರ್ಘಡ್ದ ಧಾರುಚುಲದಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಾಯಿ 36 ವರ್ಷದ ಯುವಕನೊಂದಿಗೆ ಬಾಲಕಿಯ ವಿವಾಹ ಮಾಡಿದ್ದಳು.

ಪ್ರಸ್ತುತ ಈ 12 ವರ್ಷದ ಅಪ್ರಾಪ್ತ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು , ಆಕೆಯನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಇದು ಈಕೆಗೆ ಎರಡನೇ ವಿವಾಹವಾಗಿತ್ತು. ಮೊದಲ ವಿವಾಹ ಕೌಟುಂಬಿಕ ಕಲಹದಿಂದಾಗಿ ಮುರಿದು ಬಿದ್ದಿತ್ತು.

ಇದಾದ ಬಳಿಕ ಆಕೆಗೆ ತಾಯಿ 36 ವರ್ಷದ ಯುವಕನೊಂದಿಗೆ ಮತ್ತೊಂದು ವಿವಾಹ ಮಾಡಿದ್ದಾಳೆ ಎಂದು ಪಿತೋರ್ಘಡ್ದ ಸೂಪರಿಂಟೆಂಡ್ ಆಫ್ ಪೊಲೀಸ್ ಲೋಕೇಶ್ವರ್ ಸಿಂಗ್ ಹೇಳಿದ್ದಾರೆ.

ಬಾಲಕಿಯ ತಾಯಿಯನ್ನು ಬುಧವಾರ ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ 5/6 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಅಪ್ರಾಪ್ತ ಬಾಲಕಿಯ ಪತಿಯನ್ನು ಒಂದೆರಡು ದಿನಗಳ ಹಿಂದೆ ಬಂಧಿಸಲಾಯಿತು ಮತ್ತು ಐಪಿಸಿಯ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ),

ಪೋಕ್ಸೊ ಕಾಯ್ದೆಯ 5 (1) 6 ಮತ್ತು ಬಾಲ್ಯ ವಿವಾಹ ತಡೆ ಕಲಂ 9 (ಮಗುವಿಗೆ ಮದುವೆಯಾದ ಪುರುಷನಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಸಿಂಗ್ ಹೇಳಿದರು ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಪೊಲೀಸರಿಗೆ ದೂರು ನೀಡಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕ್ತೀಯಾ, ನಾನು ಹಾಗಲ್ಲ: ಪ್ರದೀಪ್ ಈಶ್ವರ್

ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ದೆಹಲಿಯಲ್ಲಿ ಈ ವ್ಯಾಪಾರದಲ್ಲಿ ಭಾರೀ ಏರಿಕೆ

ಮುಂದಿನ ಸುದ್ದಿ