Webdunia - Bharat's app for daily news and videos

Install App

21 ವರ್ಷದ ಬಳಿಕ ಯುವತಿಯ ಮದುವೆ ರದ್ದು!?

Webdunia
ಸೋಮವಾರ, 12 ಸೆಪ್ಟಂಬರ್ 2022 (11:46 IST)
ಜೈಪುರ : 1 ವರ್ಷದ ಮಗುವಾಗಿದ್ದಾಗ ನಡೆದ ಮದುವೆ ರದ್ದಾಗಿದ್ದು 21 ವರ್ಷದ ಯುವತಿಗೆ ಹುಟ್ಟುಹಬ್ಬದ ದಿನವೇ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ.
 
ಜೋಧಪುರದ ಹಳ್ಳಿಯೊಂದರ ನಿವಾಸಿ ರೇಖಾಗೆ 1 ವರ್ಷವಾಗಿದ್ದಾಗ ಆಕೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಇತ್ತೀಚೆಗೆ ಆಕೆಯ ಅತ್ತೆಯ ಕುಟುಂಬವು ಗೌನಾ(ಹುಡುಗನ ಮನೆಗೆ ಬರುವ ಸಂಪ್ರದಾಯ) ಆಚರಣೆಗೆ ಬರುವಂತೆ ಒತ್ತಡವನ್ನು ಹೇರಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ರೇಖಾಳಿಗೆ ಈಗ ನ್ಯಾಯ ದೊರೆತಿದೆ. ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ವರ್ಷ ವಯಸ್ಸಾಗಿತ್ತು. ಅದೇ ಸಂದರ್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು.

ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ ತನ್ನ ಮನೆಯಲ್ಲೇ ಆಟವಾಡಿಕೊಂಡು ಚೆನ್ನಾಗಿ ಓದಿಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಅತ್ತೆ ಮನೆಯಿಂದ ಯಾವುದೇ ತೊಂದರೆಯೂ ಆಗಿರಲಿಲ್ಲ.

ಆಕೆಗೆ 18 ವರ್ಷ ತುಂಬಿದಾಗ ಆಕೆಯ ಅತ್ತೆಯ ಮನೆಯವರು ಧಾರ್ಮಿಕ ವಿಧಿ ವಿಧಾನದಂತೆ ಮನೆ ತುಂಬಿಸಿಕೊಳ್ಳಬೇಕು ಒಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೇಖಾಗೆ ತಾನು ಚೆನ್ನಾಗಿ ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿಗೆ ಧಕ್ಕೆ ಉಂಟಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments